ಉಜಿರೆ :ಮೂಡಬಿದರೆ ಆಳ್ವಾಸ್ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಸ್ಕೌಟ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದ “ವಿಜ್ಞಾನ ಮೇಳ’ದಲ್ಲಿ ಉಜಿರೆ ಶ್ರೀ.ಧ.ಮಂ.ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಾದ ಹರ್ಷವರ್ಧನ್ ಬಿ. ಮತ್ತು ರಿತೇಶ್ ಗೌಡ ರವರು “ಆಟೊಮೆಟಿಕ್ ಸಿಗ್ನಲ್ ಲೈಟ್ ” ತಾಂತ್ರಿಕ ಪರಿಕರದ ವಿನ್ಯಾಸವನ್ನು ಪ್ರದರ್ಶಿಸಿ ತೃತೀಯ ಬಹುಮಾವನ್ನುಗಳಿಸಿರುತ್ತಾರೆ.
ಈ ತಾಂತ್ರಿಕ ಪರಿಕರದ ಪ್ರಯೋಜನವೆಂದರೆ ವಾಹನ ಸಂಚಾರವು ಯಾವುದೇ ಟ್ರಾಫಿಕ್ ಜಾಮ್ ಇಲ್ಲದೆ ಹಾಗೂ ಸಮಯವೂ ವ್ಯರ್ಥವಾಗದಂತೆ ತಡೆಯಲು ಸಹಕಾರಿಯಾಗುತ್ತದೆ. ಶಾಲಾ ಮುಖ್ಯೋಪಾಧ್ಯಾಯ ಪದ್ಮರಾಜು ಎನ್.ರವರ ಸಹಕಾರದೊಂದಿಗೆ ಈ ತಾಂತ್ರಿಕ ಪರಿಕರದ ವಿನ್ಯಾಸದ ರಚನೆಗೆ ಮಾರ್ಗದರ್ಶನವನ್ನು ಶ್ರೀ.ಧಮಂ ಅನುದಾನಿತ ಸೆಕೆಂಡರಿ ಶಾಲೆಯ ಅಟಲ್ ಟಿಂಕರಿಂಗ್ ಶಿಕ್ಷಕಿ ನೀತಾ ಜೈನ್ ಹಾಗೂ ತರಬೇತುದಾರರಾದ ಗುರುಚೇತನ್ ಇವರು ನೀಡಿರುತ್ತಾರೆ.