Site icon Suddi Belthangady

ಎಸ್‌ಡಿಪಿಐ: ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳಾಗಿ ಆಯ್ಕೆಯಾದ ಅಕ್ಬರ್ ಹಾಗೂ ಅಲ್ಫೋನ್ಸ್ ಫ್ರಾಂಕೋರಿಗೆ ಕಾರ್ಯಕರ್ತರಿಂದ ಸ್ವಾಗತ

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಹಾಗೂ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಅಲ್ಪೋನ್ಸ್ ಫ್ರಾಂಕೋ ಅವರಿಗೆ ತಾಲೂಕಿಗೆ ಸ್ವಾಗತ ಕಾರ್ಯಕ್ರಮ ಜ.9ರಂದು ಬೆಳ್ತಂಗಡಿಯಲ್ಲಿ ಜರುಗಿತು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ ಪಕ್ಷಕ್ಕೆ ಬೆಳ್ತಂಗಡಿ ಹಾಗೂ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರಕ್ಕೆ ಇವರಿಬ್ಬರನ್ನು ಪಕ್ಷ ಅಭ್ಯರ್ಥಿಯಾಗಿ ಘೋಷಿಸಿದ್ದು, ಬೆಳ್ತಂಗಡಿಗೆ ಬಂದ ಇಬ್ಬರನ್ನು ಪಕ್ಷದ ಕಾರ್ಯಕರ್ತರು ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಮಂದಿರ ಬಳಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣವರೆಗೆ ಭವ್ಯವಾದ ಮೆರವಣಿಗೆಯಲ್ಲಿ ಕರೆತಂದು, ಬೆಳ್ತಂಗಡಿ ಬಸ್‌ನಿಲ್ದಾಣ ಬಳಿ ಪಟಾಕಿ ಸಿಡಿಸ ಸಂಭ್ರಮ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಅಕ್ಬರ್ ಬೆಳ್ತಂಗಡಿಯವರು ಕಳೆದ 20 ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಕನ್ಯಾಡಿ ದಿನೇಶ್ ಕನ್ಯಾಡಿ ಸಾವಿನ ವಿರುದ್ಧ ಹೋರಾಟ, ಕಳೆದ ಬಾರಿ ಕೊರೋನಾ ಅವಧಿಯಲ್ಲಿ, ತಾಲೂಕಿನಲ್ಲಿ ಪ್ರವಾಹ ಬಂದಾಗ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಪಕ್ಷದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನೇತೃತ್ವವನ್ನು ವಹಿಸಿದ್ದು, ಪಕ್ಷ ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ತಾಲೂಕಿನ ಎಲ್ಲಾ ಮತದಾರರು ಮತ ನೀಡಿ, ಸಹಕರಿಸುವಂತೆ ವಿನಂತಿಸಿದರು. ಮೂಡಬಿದ್ರೆ ಕ್ಷೇತ್ರದ ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೋ ಅವರು ಮಾತನಾಡಿ, ಬೆಳ್ತಂಗಡಿಯ ಎಲ್ಲರಿಗೂ ನನ್ನ ಪರಿಚಯ ಇದೆ. ಯಾವುದೇ ಜಾತಿ, ಧರ್ಮ ಬೇಧವಿಲ್ಲದೆ ಕೆಲಸ ಮಾಡುವ ವ್ಯಕ್ತಿ ನಾನು ಇನ್ನು ಕೂಡಾ ಅದನ್ನೇ ಮಾಡುತ್ತೇನೆ. ಕಡಿ, ಕೊಲ್ಲು, ಕೊಚ್ಚು ಸಂಸ್ಕೃತಿಯನ್ನು ದೂರ ಮಾಡಲು ನಮ್ಮ ಪಕ್ಷ ಹೋರಾಟ ಮಾಡುತ್ತಿದೆ. ನಮ್ಮ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಕೊಟ್ಟು 17 ಮಂದಿ ಮಾರಾಟವಾದರು ಬಿಜೆಪಿಗೆ ನಾವು ಕಾಂಗ್ರೆಸ್‌ಗೆ ಮತ ಕೊಟ್ಟು ಏನು ಪ್ರಯೋಜನ, ಬಿಜೆಪಿಯ ಅಚ್ಚೇದಿನ ಕೊಡುತ್ತಾರೆ ಏನು ಅಚ್ಚೇ ದಿನ ಎಂದು ಎಲ್ಲರಿಗೂ ಗೊತ್ತಾಗಿದೆ. 40% ಬಗ್ಗೆ ಚರ್ಚೆಯಾಗುತ್ತಿದೆ. ನಮ್ಮ ಪಕ್ಷ ಕಷ್ಟ ಬಂದವರಿಗೆ ಒಳ್ಳೆಯ ಮಾರ್ಗ ತೋರಿಸುತ್ತದೆ ಎಂದು ತಿಳಿಸಿದರು. ಈ ಸಂದರ್ಭ ಪಕ್ಷದ ತಾಲೂಕಿನ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version