Site icon Suddi Belthangady

ಬಂದಾರು: ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಬಂದಾರು: ಬಂದಾರು ಗ್ರಾಮದ ಶಿವ ಫ್ರೆಂಡ್ಸ್ ಕುರಾಯ- ಖಂಡಿಗ ಇವರ ಆಶ್ರಯದಲ್ಲಿ ತಾಲೂಕು ವಾಲಿಬಾಲ್ ಅಸೋಶಿಯೇಶನ್ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಜ.7 ರಂದು ಶಿವಪ್ರೇಂಡ್ಸ್ ಕ್ರೀಡಾಂಗಣ ಖಂಡಿಗ ಮೈರೋಳ್ತಡ್ಕದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಮುಂಡೂರು ಧರ್ಮದರ್ಶಿ ಆನಂದ ಗೌಡ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಸುಂದರ ಗೌಡ ಖಂಡಿಗ ವಹಿಸಿದ್ದರು. ಕ್ರೀಡಾಂಗಣದ ಉದ್ಘಾಟನೆಯನ್ನು ಪದ್ಮುಂಜ ಸಿಎ ಬ್ಯಾಂಕ್ ನ ಮ್ಯಾನೇಜರ್ ರಘುಪತಿ ಭಟ್ ನೆರವೇರಿಸಿದ್ದರು.

ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಬಂದಾರು ಗ್ರಾ.ಪಂ. ಅಧ್ಯಕ್ಷ ಪರಮೇಶ್ವರಿ ಕೆ. ಗೌಡ, ಕಕ್ಯಪದವು ಸತ್ಯಧರ್ಮ ಕಂಬಳ ಸಮಿತಿ ಅಧ್ಯಕ್ಷ ಕುಸುಮಾಧರ ಉರ್ಕಿ, ಪದ್ಮುಂಜ ಸಿ.ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ ಪಣೆಕ್ಕರ, ಬಂದಾರು ಗ್ರಾ.ಪಂ. ಅಭಿವ್ರದ್ದಿ ಅಧಿಕಾರಿ ಮೋಹನ್ ಬಂಗೇರ ನಾವೂರು, ಬೆಳ್ತಂಗಡಿ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಯಶವಂತ ಗೌಡ ಬೆಳಾಲು, ದೇವಿಪ್ರಸಾದ್ ಮೊಗ್ರು, ಕರಾಯ ಮಂಜುಶ್ರೀ ಪೆಟ್ರೋಲ್ ಪಂಪ್ ಮಾಲಕ ದುರ್ಗೇಶ್ , ವಾಣಿ ಕಾಲೇಜು ಉಪನ್ಯಾಸಕ ಶಂಕರ್ ರಾವ್, ಮೈರೋಳ್ತಡ್ಕ ಶಾಲಾ ಶಿಕ್ಷಕ ಮಾಧವ ಗೌಡ, ಬಂದಾರು ಗ್ರಾ.ಪಂ. ಸದಸ್ಯರಾದ ದಿನೇಶ್ ಗೌಡ, ಸುಚಿತ್ರಾ, ಕಣಿಯೂರು ಘಟಕ ವಲಯಾಧ್ಯಕ್ಷ ರುಕ್ಮಯ ಪೂಜಾರಿ, ಪೃಥ್ವಿರಾಜ್‌ ಬಂಗೇರ ಮಂಗಳೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಹಾಗೂ ಕಲ್ಲೇರಿ ಪವರ್ ಮ್ಯಾನ್ ಸಂದೀಪ್ ಎಂ, ,ರಾಜ್ಯಮಟ್ಟದಲ್ಲಿ ವಿಜೇತ ತಂಡದ ವಾಲಿಬಾಲ್ ಆಟಗಾರ ಗಗನ್ ಬಟ್ಟೆಮಾರು, ರಾಷ್ಟ್ರಮಟ್ಟದಲ್ಲಿ ವಿಜೇತ ತಂಡದ ಡಾಜ್ ಬಾಲ್ ಆಟಗಾರ ಅಭಿಶ್ರುತ್ ಇಳಂತಿಲ ರವರಿಗೆ ಸನ್ಮಾನಿಸಲಾಯಿತು.

ತಾಲೂಕು ಮಟ್ಟದ ವಾಲಿಬಾಲ್ ವಿಜೇತ ತಂಡದಲ್ಲಿ ಪ್ರಥಮ ಕಣಿಯೂರು ವಾರಿಯರ್ಸ್ ಟೀಮ್., ದ್ವಿತೀಯ ಶ್ರೀ ದೇವಿ ಎಲೆಕ್ಟ್ರಿಕಲ್ಸ್ ಎ ಟೀಮ್, ತೃತೀಯ ಶ್ರೀ ದೇವಿ ಎಲೆಕ್ಟ್ರಿಕಲ್ಸ್ ಬಿ ಟೀಮ್., ಚತುರ್ಥ ವಿ.ವಿ ಬೆಳ್ತಂಗಡಿ ಟೀಮ್., ಬೆಸ್ಟ್ ಪಾಸರ್ ಜಗದೀಶ್ ಮಾಚಾರ್, ಬೆಸ್ಟ್ ಆ್ಯಟ್ಯಾಕರ್ ರೀಪಾಜ್., ಬೆಸ್ಟ್ ಆಲ್ರೌಂಡರ್ ಗಗನ್ ಮೈರೋಳ್ತಡ್ಕ ವಿಜೇತರಾಗಿದ್ದಾರೆ.
ವಲಯ ಮಟ್ಟದ ವಾಲಿಬಾಲ್ ವಿಜೇತ ತಂಡದಲ್ಲಿ ಪ್ರಥಮ ಪ್ರೆಂಡ್ಸ್ ಮೈರೋಳ್ತಡ್ಕ ಟೀಮ್., ದ್ವಿತೀಯ ಶಿವಪ್ರೆಂಡ್ಸ್ ಕುರಾಯ-ಖಂಡಿಗ ಟೀಮ್, ತೃತೀಯಪ್ರೆಂಡ್ಸ್ ಮಾಚಾರು ಟೀಮ್., ಚತುರ್ಥ ವಿವೇಕ್ ಪ್ರೆಂಡ್ಸ್ ಕುಂಟಾಲಪಲ್ಕೆ ಟೀಮ್., ಶಿವಪ್ರೆಂಡ್ಸ್ ಕುರಾಯ-ಖಂಡಿಗ ಟೀಮ್, ತೃತೀಯ ಪ್ರೆಂಡ್ಸ್ ಮಾಚಾರು ಟೀಮ್., ಚತುರ್ಥ ವಿವೇಕ್ ಪ್ರೆಂಡ್ಸ್ ಕುಂಟಾಲಪಲ್ಕೆ ಟೀಮ್., ಬೆಸ್ಟ್ ಪಾಸರ್ ಸತೀಶ್.
ಬೆಸ್ಟ್ ಆ್ಯಟಾಕರ್ ಗಗನ್ ಮೈರೋಳ್ತಡ್ಕ., ಬೆಸ್ಟ್ ಆಲ್ರೌಂಡರ್ -ಉಮೇಶ್ ನೆಲ್ಲಿದಕಂಡ.

Exit mobile version