ಕಳೆಂಜ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸೇವಾ ಟ್ರಸ್ಟ್ ಶಿಬರಾಜೆ ಪಾದೆ ಇದರ ಸುವರ್ಣ ಮಹೋತ್ಸವ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಯಕ್ಷಗಾನ ಬಯಲಾಟವು ಜ.6 ರಂದು ಜರುಗಿತು.
ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಜಿ. ಭೀಮೇಶ್ವರ ಜೋಶಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ವಿದ್ಯೇಂದ್ರ ಗೌಡ ಶೀಂಬೂಲು ವಹಿಸಿದ್ದರು. ಮೂಡಬಿದ್ರೆ ಪದವೀಧರ ಅಧ್ಯಾಪಕರಾದ ಗುರು ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಕಳೆಂಜ ಗ್ರಾ.ಪಂ. ಅಧ್ಯಕ್ಷ ಪ್ರಸನ್ನ ಎಂ.ಪಿ., ಕಳೆಂಜ ದೇವಸ್ಥಾನದ ಅಧ್ಯಕ್ಷ ಶ್ರೀಧರ ರಾವ್ ಕಾಯಡ, ಉಪ್ಪಿನಂಗಡಿ ವಲಯ ಉಪ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಆಗಮಿಸಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಹರೀಶ್ ಪೂಂಜ ಶುಭ ಕೋರಿದರು. ತೃ`ಪ್ತಿ ಪ್ರಾರ್ಥಿಸಿದರು. ಗೌರಾವಾಧ್ಯಕ್ಷರು ಮತ್ತು ಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ್ ಗೌಡ ನೆಕ್ಕರಾಜೆ ಸ್ವಾಗತಿಸಿದರು. ಕೋಶಾಧಿಕಾರಿ ಧನಂಜಯ ಗೌಡ ವಳಚ್ಚಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ನಾರಾಯಣ ಗೌಡ ಮಾತನಾಡಿ ವರದಿ ವಾಚಿಸಿದರು. ರಾಜರಾಮ ಟಿ. ಕಾರ್ಯಕ್ರಮ ನಿರೂಪಿಸಿ, ಸುಶ್ಮಿತಾ ಗೇಣಿಗದ್ದೆ ವಂದಿಸಿದರು.
ಬೆಳಿಗ್ಗೆ ಗಣಹೋಮ, ಶ್ರೀ ದೇವಿಗೆ ಹೊರೆಕಾಣಿಕೆ ಸಮರ್ಪಣೆ, ಅಶ್ವಥಕಟ್ಟೆ ಪೂಜೆ, ಜಾಗದ ಪಂಜುರ್ಲಿ ದೈವದ ಸ್ಥಳ ಶುದ್ಧೀಕರಣ ಮತ್ತು ಪರ್ವ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ವಿನಾಯಕ ಯಕ್ಷಕಲಾ ತಂಡ ಕೆರೆಕಾಡು ಮುಲ್ಕಿ ಇವರಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.