Site icon Suddi Belthangady

ಬೆಳಾಲಿನಲ್ಲಿ ಮನೆಮನೆಗಳಲ್ಲಿ ಧರ್ಮ ಸಂಸ್ಕಾರ ಶಿಬಿರಕ್ಕೆ ಚಾಲನೆ

ಬೆಳಾಲು: ಸನಾತನ ಸಂಸ್ಥೆಯವರ ವತಿಯಿಂದ ಬೆಳಾಲು ಗ್ರಾಮದಲ್ಲಿ ಮನೆಮನೆಗಳಲ್ಲಿ ಜರಗಲಿರುವ ಧರ್ಮ ಸಂಸ್ಕಾರ ಶಿಬಿರವು ಮಾಯದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಾಲು ಇದರ ಸೇವಾಪ್ರತಿನಿಧಿ ಶ್ರೀಮತಿ ಪ್ರಭಾವತಿಯವರ ಮನೆಯಲ್ಲಿ ಉದ್ಘಾಟನೆಗೊಂಡಿತು.
ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದ ಬೆಳಾಲು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಮಾತನಾಡುತ್ತಾ , ಸದ್ಯ ಶೈಕ್ಷಣಿಕವಾಗಿ ಮಕ್ಕಳಿಗೆ ನೀಡಲಾಗದ ಹಿಂದೂ ಜೀವನ ಮತ್ತು ಧರ್ಮ ಸಂಸ್ಕಾರದ ಮೌಲ್ಯಗಳನ್ನು ಸನಾತನ ಸಂಸ್ಥೆಯವರು ನೀಡುತ್ತಿದ್ದಾರೆ. ಸನಾತನ ಹಿಂದೂ ಆಚರಣೆಗಳಲ್ಲಿ ವೈಜ್ಞಾನಿಕ ಅಂಶಗಳಿವೆ. ಪ್ರಸ್ತುತ ಅದನ್ನು ತಿಳಿದು ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ಧರ್ಮ ರಕ್ಷಣೆ, ಭವಿಷ್ಯ ಭಾರತದ ಅಗತ್ಯವಿದೆ ಈ ಬಗ್ಗೆ ಪ್ರತಿಯೊಬ್ಬರೂ ಧರ್ಮ ಶಿಕ್ಷಣ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಹಿರಿಯರಾದ ಕುಂಭ ಗೌಡ ಮಾಯ ಉಪಸ್ಥಿತರಿದ್ದರು. ಸನಾತನ ಸಂಸ್ಥೆಯ ಕಾರ್ಯಕರ್ತರಾದ ಹರೀಶ್ ಮತ್ತು ದಿವ್ಯಾರವರು ಶಿಬಿರವನ್ನು ನಡೆಸಿಕೊಟ್ಟರು.
ಮುಂದಿನ ದಿನಗಳಲ್ಲಿ ಬೆಳಾಲಿನ ಆಯ್ದ ಮನೆಗಳನ್ನು ಕೇಂದ್ರವಾಗಿಟ್ಟುಕೊಂಡು ಶಿಬಿರ ಜರಗಲಿದೆ ಎಂದು ಸಂಘಟಕರಾದ ಹರೀಶ್ ರವರು ತಿಳಿಸಿದರು.

Exit mobile version