Site icon Suddi Belthangady

ಶಿರ್ಲಾಲು ಗ್ರಾ.ಪಂ. ನಲ್ಲಿ ವಿಕಲ ಚೇತನರ ಗ್ರಾಮ ಸಭೆ

ಶಿರ್ಲಾಲು: ಶಿರ್ಲಾಲು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಾಮ ಪಂಚಾಯತ್ ನಲ್ಲಿ ಇತ್ತೀಚೆಗೆ ಅಧ್ಯಕ್ಷ ತಾರನಾಥ ಗೌಡ ರ ಅಧ್ಯಕ್ಷತೆಯಲ್ಲಿ ವಿಕಲಚೇತನರ ಸಮನ್ವಯ ಗ್ರಾಮ‌ ಸಭೆ ನಡೆಯಿತು.
ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಗ್ರಾಮ ಪಂಚಾಯತ್ ನಿಂದ ನೀಡುವ ಸೌಲಭ್ಯಗಳು ಹಾಗೂ ವಿಕಲಚೇತನರಿಗೆ ಹೆಚ್ಚಿನ ರೀತಿಯಲ್ಲಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿ ಕೊಡುವ ಬಗ್ಗೆ ಮಾತನಾಡಿದರು.
ಕಳೆದ 3 ವರ್ಷದಿಂದ ವಿಕಲಚೇತನರಿಗೆ ನೀಡಿದ ಸಹಾಯಧನ ಹಾಗೂ ಸಾಧನ ಸಲಕರಣೆಗಳು ಮತ್ತು ಯುಡಿಐಡಿ ಕಾಡ್೯ ನ ಬಗ್ಗೆ ವರದಿಯನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರದ ಹರೀಶ್ ನೀಡಿದರು.


ಬೆಳಾಲು ಗ್ರಾಮ ಪಂಚಾಯತ್ ನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಈರಣ್ಣ ಎಸ್.ಎಚ್ ವಿಕಲಚೇತನರ ಸರ್ಕಾರಿ ಸೌಲಭ್ಯ ಹಾಗೂ ಅಂಗವಿಕಲರ 2016ರ ಅಧಿನಿಯಮ ಕಾನೂನು ಮಾಹಿತಿ ಕಾರ್ಯಗಾರದ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಂಕ್ಷಿಪ್ತ ಮಾಹಿತಿ ನೀಡಿದರು. ಹಾಗೂ ಯುಡಿಐಡಿ ಕಾಡ್೯ನ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವಿಶೇಷವಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಬಿ ಕುಸುಮಾಧರ್ ಭಾಗವಹಿಸಿ ನವೀಕರಣಗೊಂಡ ವಿಕಲಚೇತನರ ಗುರುತಿನ ಚೀಟಿ ಹಾಗೂ ಯುಡಿಐಡಿ ಕಾಡ್೯ ಅನ್ನು ಫಲಾನುಭವಿಗಳಿಗೆ ವಿತರಿಸಿ ತಾಲೂಕು ಪಂಚಾಯತ್ ನ ಕ್ರಿಯಾ ಯೋಜನೆಯಲ್ಲಿ ವಿಕಲಚೇತನರಿಗೆ ಸಿಗುವ ಸೌಲಭ್ಯಗಳನ್ನು ಪಡೆದಕೊಳ್ಳಲು ತಿಳಿಸಿದರು.


ಆರ್ಥಿಕ ಸಮಾಲೋಚಕಿ ಉಷಾ ವಿ ನಾಯಕ್ ವಿಕಲಚೇತನ ಮಕ್ಕಳ ವಿಧ್ಯಾಭ್ಯಾಸ ಹಾಗೂ ಸ್ವ ಉದ್ಯೋಗಕ್ಕಾಗಿ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ತಿಳಿಸಿದರು.
ವಿಕಲಚೇತನರ ಬೇಡಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳುವ ಬಗ್ಗೆ ನಿರ್ಣಯಿಸಲಾಯಿತು.
ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗದವರು, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಮತ್ತು ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು, ಹಾಗೂ ಮೇಲಂತಬೆಟ್ಟು ಗ್ರಾಮ ಪಂಚಾಯತ್ ನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಗಣೇಶ್ ಭಾಗವಹಿಸಿದರು.
ಒಟ್ಟು ವಿಕಲಚೇತನರು ಮತ್ತು ಅವರ ಪೋಷಕರು ಸೇರಿ 62 ಜನ ಸಭೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.
ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಮೋನಮ್ಮ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಶ್ರೀಮತಿ ಪವಿತ್ರಾ ಕಾರ್ಯಕ್ರಮ ನಿರೂಪಿಸಿ, ಸಿಬ್ಬಂದಿ ಶ್ರೀಮತಿ ಸರೋಜಿನಿ ಧನ್ಯವಾದವಿತ್ತರು.

Exit mobile version