ಉಜಿರೆ : ರೋಟರಿ ಕ್ಲಬ್ ಬೆಳ್ತಂಗಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಯುಷ್ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಉಜಿರೆಯ ಸಂಯುಕ್ತ ಆಶ್ರಯದಲ್ಲಿ ಉಜಿರೆ ವಲಯದ ಅಪೌಷ್ಟಿಕ ಮಕ್ಕಳ ಅನುಪಾಲನಾ ಆರೋಗ್ಯ ತಪಾಸಣಾ ಶಿಬಿರ ಉಜಿರೆ ಗ್ರಾಪಂಚಾಯತ್ ಸಭಾಂಗಣದಲ್ಲಿ ಜ.6 ರಂದು ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗುರುತಿಸಲಾದ 14 ಅಪೌಷ್ಟಿಕ ಮಕ್ಕಳ ತೂಕ ,ಎತ್ತರ ಹಾಗೂ ಆರೋಗ್ಯದಲ್ಲಾದ ಬದಲಾವಣೆಯನ್ನು ದಾಖಲಿಸಲಾಯಿತು. ಎಲ್ಲಾ ಮಕ್ಕಳಿಗೂ ಹೆಚ್ಚುವರಿ ಪೌಷ್ಟಿಕ ಆಹಾರವನ್ನು ವಿತರಿಸಲಾಯಿತು.
ರೋಟರಿ ಕ್ಲಬ್ ನ ಡಾ. ಭಾರತಿ ಹಾಗೂ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಸಹನಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಪೋಷಕರಿಗೆ ಮಾಹಿತಿ ನೀಡಿದರು.
ಶಿಬಿರದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಆರ್ ಶೆಟ್ಟಿ, ರೋಟರಿಕ್ಲಬ್ ಅಧ್ಯಕ್ಷೆ ರೊ. ಮನೋರಮಾ ಭಟ್, ಕಾರ್ಯದರ್ಶಿ ರೊ. ರಕ್ಷಾ ರಾಘ್ನೀಶ್, ಅಂಗನವಾಡಿ ಹಿರಿಯ ಮೇಲ್ವಿಚಾರಕಿ ಶ್ರೀಮತಿ ರತ್ನಾವತಿ, ಅಂಗನವಾಡಿ ಕಾರ್ಯಕರ್ತರು ಹಾಗೂ ಮಕ್ಕಳ ಪೋಷಕರು ಭಾಗವಹಿಸಿದ್ದರು.