Site icon Suddi Belthangady

ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಮಧುಮೇಹ ತಪಾಸಣಾ ಶಿಬಿರ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜ.6ರಂದು ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಉದ್ಘಾಟಿಸಿ ಮಾತನಾಡುತ್ತಾ, ವೈದ್ಯರ ಕೊರತೆಯಿಂದ ರೋಗಿಗಳಿಗೆ ತೊಂದರೆಯಾಗಬಾರದು ಎಂಬ ನಿಟ್ಟನಲ್ಲಿ ಹೆಗ್ಗಡೆಯವರ ನಿರ್ದೇಶನದಂತೆ ನಮ್ಮ ಆಸ್ಪತ್ರೆಯಲ್ಲಿ ಗರಿಷ್ಠ ವೈದ್ಯರು ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತಿದೆ. 3 ಮಂದಿ ಫಿಸಿಷಿಯನ್‌ಗಳು ಇದ್ದು, ಇಲ್ಲಿ ಅತೀ ಹೆಚ್ಚು ಮಂದಿ ಮಧುಮೇಹ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಮಧುಮೇಹ ಖಾಯಿಲೆ ಇರುವವರು ತಮ್ಮ ಕಾಲುಗಳ ಬಗ್ಗೆಯೂ ಅತೀ ಹೆಚ್ಚು ಕಾಳಜಿ ಹೊಂದಿರಬೇಕಾಗುತ್ತದೆ. ಇದೇ ಉದ್ದೇಶದಿಂದ ನಮ್ಮ ಆಸ್ಪತ್ರೆಯಲ್ಲಿ ಡಯಾಬಿಟಿಕ್ ಫೂಟ್ ಕ್ಯಾರ್ ಆರಂಭಿಸಿದ್ದು, ಈಗಾಗಲೇ ಅನೇಕ ಮಂದಿ ಇದರ ಉಪಯೋಗ ಪಡೆಯುತ್ತಿದ್ದಾರೆ ಎಂದು ಫಿಸಿಷಿಯನ್ ಡಾ| ಸಾತ್ವಿಕ್ ಜೈನ್ ಹೇಳಿದರು.
ಸಾಮಾನ್ಯ ವೈದ್ಯನಿಂದ ಚಿಕಿತ್ಸೆ ಪಡೆಯಬಹುದಾದ ಆರಂಭಿಕ ಹಂತದಲ್ಲಿರುವ ಸಕ್ಕರೆ ಕಾಯಿಲೆಯನ್ನು ನಿರ್ಲಕ್ಷಿಸಿದರೆ ಮೂತ್ರಪಿಂಡ ತಜ್ಞರಿಂದ ಚಿಕಿತ್ಸೆ ಪಡೆಯುವ ಹಂತ ತಲುಪಬಹುದು. ಆದ್ದರಿಂದ ಮಧುಮೇಹ ಖಾಯಿಲೆಯ ಬಗ್ಗೆ ಅಸಡ್ಡೆ ಬೇಡ ಎಂದು ಫಿಸಿಷಿಯನ್ ಡಾ| ಯಶಸ್ವಿನಿ ಹೇಳಿದರು.
ಮತ್ತೋರ್ವ ಫಿಸಿಷಿಯನ್ ಡಾ| ಶುತಿ ಮಾತನಾಡಿ ಅನಗತ್ಯವಾಗಿ ಸಕ್ಕರೆ ಖಾಯಿಲೆಯ ಬಗ್ಗೆ ಭಯಪಡುವ ಬದಲು ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಮಧುಮೇಹ ಖಾಯಿಲೆಯನ್ನು ಹತೋಟಿಯಲ್ಲಿ ಇಡಬಹುದು ಎಂದರು.
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಜ.6ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನಡೆದ ಉಚಿತ ಮಧುಮೇಹ ತಪಾಸಣಾ ಶಿಬಿರದಲ್ಲಿ 139 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

Exit mobile version