Site icon Suddi Belthangady

ಕುದ್ಯಾಡಿ: ಚಿರತೆ ದಾಳಿಗೆ ಗೋವು ಬಲಿ, ಅರಣ್ಯ ಅಧಿಕಾರಿಗಳ ಭೇಟಿ

ಕುದ್ಯಾಡಿ: ಚಿರತೆ ದಾಳಿಗೆ ದನವೊಂದು ಬಲಿಯಾದ ಘಟನೆ ಕುದ್ಯಾಡಿ ಗ್ರಾಮದಲ್ಲಿ ನಡೆದಿದೆ.

ಕುದ್ಯಾಡಿ ಗ್ರಾಮದ ಕೆಳಗಿನಬೆಟ್ಟು ಮನೆಯ ಶೀನ ಪೂಜಾರಿಯವರು ತಮ್ಮ‌ ದನವನ್ನು ಜ.5 ರಂದು ಬೆಳಿಗ್ಗೆ ತೋಟದಲ್ಲಿ ಮೇಯಲು ಬಿಟ್ಟಿದ್ದರು. ಸುಮಾರು 11 ಗಂಟೆ ಸಮಯಕ್ಕೆ ಚಿರತೆ ದನದ ಮೇಲೆ ದಾಳಿ ಮಾಡಿದೆ. ಮನೆಯವರು ತೋಟಕ್ಕೆ ಬಂದಾಗ ಚಿರತೆ ಮನೆಯವರನ್ನು ಅಟ್ಟಾಡಿಸಿದೆ.

ಚಿರತೆಯ ದಾಳಿಗೆ ದನ ಬಲಿಯಾಗಿದೆ. ಕೂಡಲೇ ಶೀನ ಪೂಜಾರಿಯವರು ಸ್ಥಳೀಯ ಪಂಚಾಯತ್ ಸದಸ್ಯ ಶುಭಕರ್ ಅವರಿಗೆ ಕಾಲ್ ಮಾಡಿ ತಿಳಿಸಿದ್ದು, ಅವರು ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಸುಲ್ಕೇರಿ ಪಂಚಾಯತ್ ಅಧ್ಯಕ್ಷ ನಾರಾಯಾಣ ಪೂಜಾರಿ, ಅಳದಂಗಡಿ ಉಪ ಅರಣ್ಯಧಿಕಾರಿ ಸುರೇಶ್ ಗೌಡ ಹಾಗೂ ಸ್ಥಳೀಯರು ಬೇಟಿ ನೀಡಿದ್ದಾರೆ.

ಈ ಭಾಗದಲ್ಲಿ ಕಳೆದ ಕೆಲ ಸಮಯದಿಂದ ಚಿರತೆ ನಾಯಿ, ದನ, ಕೋಳಿಗಳ ಮೇಲೆ ದಾಳಿ ಮಾಡಿದೆ. ಚಿರತೆ ಹಾವಳಿಯಿಂದ ಈ ಭಾಗದ ಜನ ಭಯಬೀತರಾಗಿದ್ದಾರೆ. ಇಗಾಗಲೇ ಬೋನ್ ಅಳವಡಿಸಲಾಗಿದೆ.

Exit mobile version