ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಜ.6ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಉಚಿತ ಮಧುಮೇಹ ತಪಾಸಣಾ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ವೈದ್ಯರ ಸಮಾಲೋಚನೆ ಉಚಿತ, ಜಿ.ಆರ್.ಬಿ.ಎಸ್ ಪರೀಕ್ಷೆ, ರಕ್ತದೊತ್ತಡ ಹಾಗೂ ಸ್ಯಾಚ್ಯುರೇಶನ್ ಪರೀಕ್ಷೆ ಉಚಿತ, ಒಳರೋಗಿ ವಿಭಾಗದಲ್ಲಿ 10% ರಿಯಾಯಿತಿ, ಔಷಧದಲ್ಲಿ 10% ರಿಯಾಯಿತಿ, ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ 20% ರಿಯಾಯಿತಿ ನೀಡಲಾಗುವುದು.
ಮಧುಮೇಹದಿಂದ ನರಗಳಿಗೆ ಆದ ತೊಂದರೆಯನ್ನು ಸುಧಾರಿತ ತಂತ್ರಜ್ಞಾನ ಹೊಂದಿರುವ ಡಿವೈಸ್ ಮೂಲಕ ಪತ್ತೆ ಹಚ್ಚಲಾಗುವುದು. ಈ ಪರೀಕ್ಷೆ ಕೂಡ ಉಚಿತವಾಗಿರುತ್ತದೆ.
ಡಾ| ಸಾತ್ವಿಕ್ ಜೈನ್, ಡಾ| ಯಶಸ್ವಿನಿ, ಡಾ| ಶ್ರುತಿ ಪಾಲೊಳ್ಳಲಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.