ಉಜಿರೆ:ಇಲ್ಲಿನ ಟಿ.ಬಿ ಕ್ರಾಸ್ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಹತ್ತಿರ ಮುಖ್ಯ ರಸ್ತೆಯ ಬಿಲ್ಡಿಂಗ್ ಒಂದರಲ್ಲಿ ಅತಿಯಾಸ್ ಎಲೆಕ್ಟ್ರಿಕ್ ವೈಕಲ್, ಗುರು ಎಂಟರ್ಪ್ರೈಸಸ್ ನ ಶುಭಾರಂಭವು ಜ.5 ರಂದು ನಡೆಯಿತು.
ನೂತನ ಸಂಸ್ಥೆಯ ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯ ನೇರವೇರಿಸಿ ಶುಭಕೋರಿದರು.
ಕಾರ್ಯಕ್ರಮದಲ್ಲಿ ಲಾಯಿಲ ಗ್ರಾ.ಪಂ ಅಧ್ಯಕ್ಷೆ ಆಶಾ ಬೆನಡಿಕ್ಟ್ ಸಲ್ದಾನ, ಉಜಿರೆ ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್, ನಾವೂರು ಆರೋಗ್ಯ ಕ್ಲಿನಕ್ ನ ಡಾ.ಪ್ರದೀಪ್ ಕುಮಾರ್ ಎ, ಹಾಜಿ ಹೈದರ್ ಮದನಿ ಕಾಶಿಬೆಟ್ಟು, ಅತಿಯಾಸ್ ಕಂಪೆನಿಯ ಕರ್ನಾಟಕ ಸೇಲ್ಸ್ ಹೆಡ್ ತೇಜ ಎಂ, ಹಾಸನ ಸಾನ್ವಿ ಮೋಟಾರ್ಸ್ ನಿರ್ದೇಶಕ ಲೋಹಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬೆಸ್ಟ್ ಪೌಂಢೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಕೃಷ್ಣಪ್ಪ ಪೂಜಾರಿ ಮತ್ತು ಗುಲಾಬಿ, ಪ್ರಗತಿಪರ ಕೃಷಿಕ ಪ್ರಮೋದ್ ಕೋಟ್ಯಾನ್ ಬಂಟ್ವಾಳ, ಭಾರತ್ ಆಟೋಕಾರ್ಸ್ ನ ಪ್ರವೀಣ್ ಕುಮಾರ್ ಹೆಚ್.ಎಸ್,ಜಗದೀಶ್ ಕೋಟ್ಯಾನ್, ಪ್ರಮುಖರಾದ ಬಾಲಕೃಷ್ಣ ಬಿರ್ಮೊಟ್ಟು,ರಜತ್, ರಮೇಶ್ ಕೆಂಗಾಜೆ,ದಿನೇಶ್ ಬಂಗೇರ,ಚೈತ್ರಾಲಕ್ಷ್ಮಿ,ಮೋಹನ್ ಪೆಜಕ್ಕಳ, ಹಾಗೂ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದು ಶುಭಕೋರಿದರು.
ಗಂಗಾಧರ ಪರಾರಿ ಸ್ವಾಗತಿಸಿದರು, ನಿಸಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನೂತನ ಸಂಸ್ಥೆಗೆ ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕ ಗಣೇಶ್ ಬಂಗೇರ- ಕಾವ್ಯ ದಂಪತಿ ಹಾಗೂ ಕುಟುಂಬಸ್ಥರು ಸ್ವಾಗತಿಸಿ ಸತ್ಕರಿಸಿದರು.
ಪ್ರಥಮ ಗ್ರಾಹಕರಾದ ಅಬ್ರಹಾಂ ಜೇಮ್ಸ್ ಉಜಿರೆ, ಅನಾಸ್ ಅಹಮ್ಮದ್ ಅವರನ್ನು ಗೌರವಿಸಲಾಯಿತು.
ನೂತನ ಸಂಸ್ಥೆಯಲ್ಲಿ ಬ್ಯಾಟರಿ ಚಾಲಿತ ಬೈಕ್, ಸ್ಕೂಟರ್,ಸ್ಕೂಟಿ ಗಳು ಲಭ್ಯವಿದೆ. ಹಾಗೂ ಸರ್ವಿಸ್ ವ್ಯವಸ್ಥೆ, ಚಾರ್ಜಿಂಗ್ ವ್ಯವಸ್ಥೆ ಲಭ್ಯ ಎಂದು ಮಾಲಕರು ತಿಳಿಸಿರುತ್ತಾರೆ. ಬುಕ್ಕಿಂಗ್ ಆರಂಭಗೊಂಡಿದೆ.