ವೇಣೂರು: ಅಜಿಲ ಸೀಮೆಯ ಇತಿಹಾಸ ಪ್ರಸಿದ್ಧ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಗುಲದ ನೂತನ ಕೊಡಿಮರ ಸ್ತಂಭನ ಮುಹೂರ್ತ ಕಾರ್ಯಕ್ರಮ ಜ.4 ರಂದು ಜರಗಿತು.
ದೇವಸ್ಥಾನದ ತಂತ್ರಿ ಶ್ರೀಪಾದ ಪಾಂಗಣ್ಣಾಯರು ಹಾಗೂ ಪ್ರಧಾನ ಅರ್ಚಕರಾದ ವಿಷ್ಣುಮೂರ್ತಿ ಭಟ್ ಪೂಜಾ ವಿಧಾನ ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್, ಕೊಡಿಮರದ ದಾನಿ ವಿ. ಪ್ರವೀಣ್ ಕುಮಾರ್ ಇಂದ್ರ, ತಾಂತ್ರಿಕ ಸಮಿತಿಯ ಸಂಚಾಲಕ ಯಜ್ಞನಾರಾಯಣ ಭಟ್, ವ್ಯವಸ್ಥಾಪನ ಸಮಿತಿ ಸದಸ್ಯರು, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.
ಫೆ.19ರಿಂದ 27ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಲಿದೆ. ಈಗಾಗಲೇ ಶಿಲಾಮಯ ಗರ್ಭಗುಡಿ ಮತ್ತು ಮಹಡಿಗೆ ತಾಮ್ರ ಅಳವಡಿಕೆ, ಶಿಲಾಮಯ ಸುತ್ತುಪೌಳಿ, ನಂದಿಮಂಟಪ, ವಸಂತ ಮಂಟಪದ ಕಾರ್ಯ ಪೂರ್ಣಗೊಂಡಿದೆ. ಶಿಲಾಮಯ ಮುಖಮಂಟಪ, ಸುತ್ತುಪೌಳಿಯ ಮಹಡಿಯ ಕಾರ್ಯ ಭಾಗಶಃ ಪೂರ್ಣಗೊಂಡಿದೆ.