ಬೆಳ್ತಂಗಡಿ: ಪ್ರತೀ ಗ್ರಾಮಗಳ ಜನತೆ ಒಟ್ಟಾಗಿ ಸಂಘ ರಚಿಸಿಕೊಂಡು, ತಾಲೂಕಿನ ಸಂಘ ಬಲಪಡಿಸಿದಾಗ ಸಮುದಾಯದ ಅಭಿವೃದ್ಧಿ ಸಾಧ್ಯ. ತಾಲೂಕಿನ ಸಮುದಾಯದವರು ಒಂದುಗೂಡಿ ಕೆಲಸ ನಿರ್ವಹಿಸಿದಲ್ಲಿ ಜಟಿಲ ಕೆಲಸಗಳೂ ಸುಸೂತ್ರವಾಗಿ ನೆರವೇರುತ್ತದೆ ಎಂದು ತಾಲೂಕು ಮರಾಟಿ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಉಮೇಶ್ ಕೇಳ್ತಡ್ಕ ಹೇಳಿದರು.
ಅವರು ತಾಲೂಕು ಮರಾಟಿ ಸೇವಾ ಸಂಘದ ಮಾಸಿಕ ಸಭೆಯನ್ನು ತಣ್ಣೀರುಪಂಥ ಗ್ರಾಮದ ಕೃಪ್ಪ ನಾಯ್ಕ್ ಅವರ ನಿವಾಸದಲ್ಲಿ ನಡೆಸಿ ಮಾತನಾಡಿದರು.
ಸಂಘದ ಮಾಸಿಕ ವರದಿ ಮಂಡಣೆ ಮಾಡಲಾಯಿತು.
ಶ್ರೀ ದೇವಿ ನಗರ, ಶ್ರೀ ಮಹಮ್ಮಯಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಿದಾನಂದ ನಾಯ್ಕ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲನಾಯ್ಕ್, ಆಡಳಿತ ಮೊಕ್ತೇಸರ ಲಿಂಗಪ್ಪನಾಯ್ಕ್, ಸ್ಥಳೀಯರಾದ ಸುಂದರ ನಾಯ್ಕ್, ಪೂವಪ್ಪ ನಾಯ್ಕ್, ಸುರೇಶ್ ಎಚ್.ಎಲ್., ತಾಲೂಕು ಸಮಿತಿ ಉಪಾಧ್ಯಕ್ಷ ಸತೀಶ್ ಹೆಚ್.ಎಲ್., ಹರೀಶ್ ಪೆರಾಜೆ, ರವಿ ಬಡಕೋಡಿ, ಚಂದ್ರಾವತಿ, ಶರತ್ ಕಣಿಯೂರು, ಶ್ರೀನಿವಾಸ್, ರವಿ ಬಡಕೋಡಿ, ರಾಜೇಶ್ ಮದ್ದಡ್ಕ, ಪ್ರಜ್ವಲ್, ಹರ್ಷಿತ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಚಿದಾನಂದ ವಂದಿಸಿದರು.