Site icon Suddi Belthangady

ಓಡಿಲ್ನಾಳ : ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ

ಓಡಿಲ್ನಾಳ : ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ  ದೇವಸ್ಥಾನ  ಶ್ರೀರಾಮ ನಗರ ಮೈರಲ್ಕೆ ಓಡಿಲ್ನಾಳ ಇದರ ಬ್ರಹ್ಮಕಲಶೋತ್ಸವ ನೀಲೇಶ್ವರ ಆಲಂಬಾಡಿ ವೇದಮೂರ್ತಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜ.3ರಂದು ಜರಗಿತು.

ಬೆಳಿಗ್ಗೆ ಗಣಹೋಮ, ಬ್ರಹ್ಮಕಲಶೋತ್ಸವ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಸಂಪ್ರೋಕ್ಷಣೆ, ಮಂಗಳ ಮಂತ್ರಾಕ್ಷತೆ ಜರುಗಿತು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಾಸಕ ಹರೀಶ್ ಪೂಂಜ, ಕಾರ್ಯಾಧ್ಯಕ್ಷ ರಾಜ್ ಪ್ರಕಾಶ್ ಪಡ್ಡೈಲು, ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಕೆ ಜೈನ್, ಕೋಶಾಧಿಕಾರಿ ಮನೋಹರ ಪಿ ಸಿ, ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಜಯರಾಮ್ ಶೆಟ್ಟಿ ಪಡಂಗಡಿ, ಕೋಶಾಧಿಕಾರಿ ಗೋಪಾಲ್ ಶೆಟ್ಟಿ ಕೋರ್ಯಾರು, ಶಶಿಧರ ಶೆಟ್ಟಿ ನವಶಕ್ಯಿ ಗುರುವಾಯನಕೆರೆ, ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್ ಅಧ್ಯಕ್ಷ ವ್ರಷಭ , ಆರಿಗಪರಾರಿ ಗುತ್ತು ಮತ್ತು ಸದಸ್ಯರು ಮೋಹನ್ ಪವಿತ್ರ ಪಾಣಿ ಮೋಹನ್  ಕೆರ್ಮುಣ್ಣಾಯ ಮೈರಾರು, ಬ್ರಹ್ಮಕಲಶೋತ್ಸವ ಸಮಿತಿ  ಪಧಾಧಿಕಾರಿಗಳು, ವಿವಿಧ ಉಪ ಸಮಿತಿಗಳ ಸಂಚಾಲಕರು, ಸಹ ಸಂಚಾಲಕರು, ಸರ್ವ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

Exit mobile version