ಮಂಜೊಟ್ಟಿ : ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝ ಗಾರ್ಡನ್ ಮಂಜೊಟ್ಟಿ ಇಲ್ಲಿ ಹೊಸ ವರ್ಷಚಾರಣೆಯ ಪ್ರಯುಕ್ತ ಜ. 02 ರಂದು ಸ್ಟಾರ್ ಫುಡ್ ಫೆಸ್ಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಒಂದನೇ ತರಗತಿಯಿಂದ 9ನೇ ತರಗತಿಯ ವರೆಗಿನ ಸುಮಾರು 127 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ವಿವಿಧ ಬಗೆಯ ಖಾದ್ಯಗಳನ್ನು ಪಾನೀಯಾಗಳನ್ನು ಬೆಂಕಿ ರಹಿತವಾಗಿ ತಯಾರಿಸಿದ್ದರು. ಆಟ ಪಾಠದ ಜೊತೆಗೆ ಅಡುಗೆಯ ಕಲೆಯನ್ನು ಕಲಿತು ಪ್ರದರ್ಶಿಸಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಶಾಲಾ ಎಜುಕೇಶನ್ ಟ್ರಸ್ಟ್ ನ ಸಂಚಾಲಕ ಜನಾಬ್ ಸೈಯದ್ ಹಬೀಬ್ ಹಾಗೂ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಾಕಿನ್ ಬಿನ್ ಇವರು ವಿದ್ಯಾರ್ಥಿಗಳು ತಯಾರಿಸಿರುವ ವಿವಿಧ ಬಗೆಯ ಖಾದ್ಯಗಳನ್ನು ವೀಕ್ಷಿಸಿ ಅವುಗಳ ರುಚಿಯನ್ನು ಸವಿದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಸವಿದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.