Site icon Suddi Belthangady

ಜ.5: ಉಜಿರೆ ಟಿ.ಬಿ ಕ್ರಾಸ್ ನಲ್ಲಿ ಅತಿಯಾಸ್ ಎಲೆಕ್ಟ್ರಿಕ್ ವೈಕಲ್ ಶಾಪ್ ಶುಭಾರಂಭ

ಉಜಿರೆ:ಇಲ್ಲಿನ ಟಿ.ಬಿ ಕ್ರಾಸ್ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಹತ್ತಿರ ಮುಖ್ಯ ರಸ್ತೆಯ ಬಿಲ್ಡಿಂಗ್ ಒಂದರಲ್ಲಿ ಅತಿಯಾಸ್ ಎಲೆಕ್ಟ್ರಿಕ್ ವೈಕಲ್, ಗುರು ಎಂಟರ್ಪ್ರೈಸಸ್ ನ ಶುಭಾರಂಭವು ಜ. .5 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ನೂತನ‌ ಸಂಸ್ಥೆಯ ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯ ನೇರವೇರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಲಾಯಿಲ ಗ್ರಾ.ಪಂ ಅಧ್ಯಕ್ಷೆ ಆಶಾ ಬೆನಡಿಕ್ಟ್ ಸಲ್ದಾನ, ಕಟ್ಟಡ ಮಾಲಕ ಹಾಜಿ ಅಬ್ದುಲ್ ರಜಾಕ್, ಉಜಿರೆ ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್, ನಾವೂರು ಆರೋಗ್ಯ ಕ್ಲಿನಕ್ ನ ಡಾ.ಪ್ರದೀಪ್ ಕುಮಾರ್ ಎ,ಹಾಜಿ ಹೈದರ್ ಮದನಿ ಕಾಶಿಬೆಟ್ಟು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕ ಗಣೇಶ್ ಬಂಗೇರ ತಿಳಿಸಿದ್ದಾರೆ.

ನೂತನ ಸಂಸ್ಥೆಯಲ್ಲಿ ಬ್ಯಾಟರಿ ಚಾಲಿತ ಬೈಕ್, ಸ್ಕೂಟರ್, ಸ್ಕೂಟಿ ಗಳು ಲಭ್ಯವಿದೆ. ಹಾಗೂ ಸರ್ವಿಸ್ ವ್ಯವಸ್ಥೆ, ಚಾರ್ಜಿಂಗ್ ವ್ಯವಸ್ಥೆ ಲಭ್ಯ ಎಂದು ಮಾಲಕರು ತಿಳಿಸಿರುತ್ತಾರೆ. ಬುಕ್ಕಿಂಗ್ ಆರಂಭಗೊಂಡಿದೆ.

Exit mobile version