ಚಾರ್ಮಾಡಿ : ಚಾರ್ಮಾಡಿ ಭಾಗದ ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಇಲ್ಲದೆ ಮಕ್ಕಳು, ಸಾರ್ವಜನಿಕರು ಪರದಾಡುತ್ತಿದ್ದು, ಮಕ್ಕಳು ಮನೆಗೆ ತಲುಪುವಾಗ 7 ರಿಂದ 8:00 ಗಂಟೆ ರಾತ್ರಿ ಆಗುತ್ತಿದ್ದು ಸುಮಾರು 2 ವರ್ಷದಿಂದ ಕೋವಿಡ್ ಮುಗಿದ ನಂತರ ಈ ಸಮಸ್ಯೆ ಮುಂದುವರಿಯುತ್ತಿದೆ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಜ.2 ರಂದು ಸೋಮಂತಡ್ಕದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಚಾರ್ಮಾಡಿ, ದಿಡುಪೆ ಕಾಯಾರ್ತಡ್ಕ ಸ್ಥಳೀಯ ಸಾರಿಗೆ ವಾಹನ ಟ್ರಿಪ್ ಕ್ಯಾನ್ಸಲ್ ಮಾಡುತ್ತಿರುವುದು, ಪುತ್ತೂರು ವಿಭಾಗದ ಮತ್ತು ಧರ್ಮಸ್ಥಳ ವಿಭಾಗದ ವೇಗದೂತ ಬಸ್ ಗಳು ಸೋಮಂತಡ್ಕದಲ್ಲಿ ನಿಲ್ಲಿಸುವಂತೆ ಸಾರಿಗೆ ವಿಭಾಗದಿಂದ ಸೂಚನೆಯಿದ್ದು, ಸ್ಟಾಪ್ ನೀಡದ ಕೆ.ಎಸ್.ಆರ್.ಟಿ.ಸಿ ಇಲಾಖೆಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ. ಇದರ ಬಗ್ಗೆ ಶಾಸಕರ ಗಮನಕ್ಕೆ ನೀಡಲಾಗಿತ್ತು.