Site icon Suddi Belthangady

ಕುದ್ಯಾಡಿ ಗರಡಿಯ ಪ್ರತಿಷ್ಠಾ ಕಲಶಾಭಿಷೇಕ: ಚಪ್ಪರ ಮುಹೂರ್ತ

ವೇಣೂರು: ಕುದ್ಯಾಡಿ ಗ್ರಾಮದ ಅಂಗಣಗುಡ್ಡೆ ಅಂಗಂದಮೇಲ್ ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮಬೈದರ್ಕಳ ಗರಡಿಯು ಶಿಲಾಮಯವಾಗಿ ನವೀಕೃತಗೊಂಡಿದ್ದು, ಜ.24ರಿಂದ 26 ರವರೆಗೆ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ವರ್ಷಾವಧಿ ನೇಮೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಚಪ್ಪರ ಮುಹೂರ್ತ ನೆರವೇರಿತು.
ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ಕೊರಗಪ್ಪ ಪೂಜಾರಿ ಕೊಡಿಬಾಳೆ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ವೈದ್ಯ ಡಾ| ಎನ್.ಎಂ. ತುಳುಪುಳೆ, ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ. ಧರಣೇಂದ್ರ ಕುಮಾರ್, ಗುರುನಾರಾಯಣ ಸೇವಾ ಸಂಘ ಅಳದಂಗಡಿ ವಲಯದ ಅಧ್ಯಕ್ಷ ಸಂಜೀವ ಪೂಜಾರಿ ಕೊಡಂಗೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಅನಂತರಾಜ ಜೈನ್ ಅಂತರಗುತ್ತು, ಭಂಡಾರದ ಮನೆಯ ಯಜಮಾನರಾದ ಶಶಿಕಾಂತ್ ಜೈನ್ ಮುಂಡಾಜೆಗುತ್ತು, ಲಿಂಗಪ್ಪ ಬಂಗೇರ ಕೆಂಪನೊಟ್ಟುಗುತ್ತು, ಅಚ್ಯುತ ಪೂಜಾರಿ ಕೊಡಿಬಾಳೆಗುತ್ತು, ಗ್ರಾಮದ ಗುರಿಕಾರ ವಾಸು ಪೂಜಾರಿ, ಸುಲ್ಕೇರಿ ಗ್ರಾ.ಪಂ. ಸದಸ್ಯ ಶುಭಕರ ಪೂಜಾರಿ, ಪದ್ಮಾಂಬ ಕೇಟರರ್ಸ್‌ನ ಸುಕೇಶ್ ಜೈನ್, ಜಾತ್ರೋತ್ಸವ ಸಮಿತಿ ಕಾರ್ಯದರ್ಶಿ ಸುಂದರ ಆಚಾರ್ಯ ಅಂತರೊತ್ತು, ಗುತ್ತು, ಬರ್ಕೆ ಮನೆಯವರು, ಗ್ರಾಮಸ್ಥರು ಉಪಸ್ಥಿತರಿದ್ದರು. ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ಆಸ್ರಣ್ಣ ಪ್ರಕಾಶ್ ಭಟ್ ಅವರು ಪೂಜಾ ವಿಧಾನ ನೆರವೇರಿಸಿದರು.

ಕುದ್ಯಾಡಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ ಕುದ್ಯಾಡಿಗುತ್ತು, ಪ್ರಾಸ್ತಾವಿಸಿದರು.

ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸದಾನಂದ ಬಿ. ಬಾಕ್ಯರಡ್ಡ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಸಜಿತ್ ಕುಮಾರ್ ಪಿಜತ್ಯರಡ್ಡ ವಂದಿಸಿದರು. ಎನ್.ಎಂ. ತುಳುಪುಳೆ ಜೀರ್ಣೋದ್ಧಾರಕ್ಕೆ ರೂ. 52,000ಮೊತ್ತದ ದೇಣಿಗೆಯನ್ನು ಇದೇ ಸಂದರ್ಭದಲ್ಲಿ ಹಸ್ತಾಂತರಿಸಿದರು.

Exit mobile version