ಚಾರ್ಮಾಡಿ: ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ಶಿಲಾಮಯ ಧ್ವಜಸ್ಥಂಭದ ಸ್ಥಾಪನ ಕಾರ್ಯಕ್ರಮವು ಜ.1ರಂದು ಜರುಗಿತು.
ಕಾರ್ಕಳದಿಂದ ಆಗಮಿಸಿದ ಧ್ವಜಸ್ಥಂಭವನ್ನು ಚಾರ್ಮಾಡಿ,ಚಿಬಿದ್ರೆ ಹಾಗೂ ತೋಟತ್ತಾಡಿ ಗ್ರಾಮಸ್ಥರ ಕೂಡುವಿಕೆಯಲ್ಲಿ ಮೆರವಣಿಗೆ ಮೂಲಕ ಕಕ್ಕಿಂಜೆಯ ಹಾಲಾಜೆ ಕೆರೆ ಬಳಿಯಿಂದ ಚಾರ್ಮಾಡಿ ಪೇಟೆಯಾಗಿ ದೇವಸ್ಥಾನಕ್ಕೆ ಕೊಂಡೊಯ್ದು ಅರ್ಚಕ ಶ್ರೀನಿವಾಸ ಉಪಾಧ್ಯಾಯ ಅವರ ನೇತೃತ್ವದಲ್ಲಿ ಸ್ಥಾಪಿಸಲಾಯಿತು.
ಶಾಸಕ ಹರೀಶ್ ಪೂಂಜ , ಎಂ ಎಲ್ ಸಿ ಪ್ರತಾಪ ಸಿಂಹ ನಾಯಕ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಕೊಡಿಮರ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.