ಜಾಗತಿಕ ಪ್ರಪಂಚದಲ್ಲಿ ಕೆಚ್ಚೆದೆಯ ಧಾರ್ಮಿಕ ದ್ವನಿ ಯಾಗಿದ್ದ ಜಗದ್ಗುರು ವಿಶ್ರಾಂತ ಪೋಪ್ ಹದಿನಾರನೇ ಬೆನೆಡಿಕ್ಟ್
ಪಿಯಾನೋ ನುಡಿಸುವ ಪ್ರೊಫೆಸರ್ ಮತ್ತು ಧಾರ್ಮಿಕ ಶಾಸ್ತ್ರದಲ್ಲಿ ಅಸಾಧಾರಣ ತಿಳಿವಳಿಕೆ ಹೊಂದಿದ್ದರು. ಜಾಗತಿಕ ಧಾರ್ಮಿಕ ಮುಖಂಡರಲ್ಲಿ ಪ್ರಭಾವಿ ಯಾಗಿದ್ದು ಪ್ರಮುಖ ಕ್ರೈಸ್ತ ಧರ್ಮಗುರುಗಳಲ್ಲಿ ಒಬ್ಬರಾಗಿದ್ದ ವಿಶ್ರಾಂತ ಪೋಪ್ ಬೆನೆಡಿಕ್ಟ್ ಅವರು ವ್ಯಾಟಿಕನ್‌ನಲ್ಲಿ ಶನಿವಾರ ನಿಧನರಾದರು. 95 ವರ್ಷದ ಪೋಪ್ ಬೆನೆಡಿಕ್ಟ್ ಅವರು ಹಲವು ದಿನಗಳಿಂದ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು.
ವಿಶ್ರಾಂತ ಪೋಪ್ ಬೆನೆಡಿಕ್ಟ್ ವ್ಯಾಟಿಕನ್‌ನಲ್ಲಿ ಶನಿವಾರ ಬೆಳಿಗ್ಗೆ ನಿಧನರಾದರು.
ಹಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ 95ರ ಬೆನೆಡಿಕ್ಟ್ 2013ರಲ್ಲಿ ಪೋಪ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಜರ್ಮನ್ ಮೂಲದ ಧರ್ಮಗುರು ಸರಿ ಸುಮಾರು ಎಂಟು ವರ್ಷಗಳ ಕಾಲ ಜಾಗತಿಕ ಕ್ರೈಸ್ತ ಧರ್ಮದ ಮುಖಂಡರಾಗಿಯೂ. ಪ್ರಪಂಚದ ಧಾರ್ಮಿಕ ದ್ವನಿಯಾಗಿಯೂ, ಸಮಾಜ, ಕುಟುಂಬ, ಧಾರ್ಮಿಕ ನೆಲೆಗಟ್ಟು ಈ ವಿಚಾರ ಗಳಲ್ಲಿ ಸಾಂಪ್ರದಾಯಿಕ ಮತ್ತು ನೈಸರ್ಗಿಕ ವಿಚಾರ ದಾರೆಯ ವ್ಯಕ್ತಿ ಯಾಗಿದ್ದರು. ಇವರ ನಿಧನ ವೂ ಧಾರ್ಮಿಕ ಪ್ರಪಂಚ ಕ್ಕೆ ತುಂಬಲಾರದ ನಷ್ಟ ವೆಂದು ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ದರ್ಮಾ ಧ್ಯಕ್ಷರಾದ ಬಿಶಪ್ ಲಾರೆನ್ಸ್ ಮುಕ್ಕುಯಿ ಪ್ರತಿ ಕ್ರೀಯಿಸಿದರು ಕೆ ಎಸ್ ಎಂ ಸಿ ಯೇ ಪದಾಧಿಕಾರಿಗಳಿಂದ ಅಗಲಿದ ಪರಮ ಪೂಜ್ಯರಿಗೆ ಭಾವಪೂರ್ಣ ಪ್ರಣಾಮಗಳು ಅರ್ಪಿಸಲಾಯಿತು.ಧರ್ಮ ಪ್ರಾಂತ್ಯ ದ ಎಲ್ಲಾ ಚರ್ಚು ಗಳಲ್ಲಿ ವಿಶೇಷ ಘಂಟೆ ಮೊಳಗಿಸಿ ಅಗಲಿದ ಜಗದ್ಗು ರುಗಳಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.