ವಣಸಾಯ ಶ್ರೀ ವನದುರ್ಗ, ಕೊಡಂಗೆ ಶ್ರೀ ಭಟಾರಿ ಯಾನೆ ಮಲೆ ದೇವತೆ, ಕಲ್ಕುಡಗುಡ್ಡೆ ಶ್ರೀ ಕಲ್ಕುಡ-ಕಲ್ಲುರ್ಟಿ ವ್ಯಾಘ್ರ ಚಾಮುಂಡಿ ಹಾಗೂ ಪರಿವಾರ ದೈವ ಗಳ ಸಾನಿಧ್ಯದಲ್ಲಿ ನಡೆದ ಪ್ರತಿಷ್ಠ ಕಲಶೋತ್ಸವ ಹಾಗೂ ನೇಮೋತ್ಸವದ ಪ್ರಯುಕ್ತ ಕಲ್ಕುಡ ಗುಡ್ಡೆಯಲ್ಲಿ ಡಿ.30ರಂದು ಧಾರ್ಮಿಕ ಸಭೆ ನಡೆಯಿತು.
ಜಗದ್ಗುರು ಶ್ರೀ ಮನ್ವಧ್ಯಾಚಾರ್ಯ ಮೂಲ ಮಹಾಸಂಸ್ಥಾನ, ಶ್ರೀ ವಾಮನ ತೀರ್ಥ ಪರಂಪರೆ ಶ್ರೀ ಶೀರೂರು ಮಠ ಉಡುಪಿಯ ಶ್ರೀ ಶ್ರೀ ವೇದವರ್ಧನ ತೀರ್ಥರು ಹಾಗೂ ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಗಳು ಅನುಗ್ರಹ ಸಂದೇಶ ನೀಡಿದರು. ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜಾ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಪ್ರಧಾನ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್ ಆಗಮಿಸಿದರು. ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿ ಅಧ್ಯಕ್ಷ ವಿಶ್ವನಾಥ ರಾವ್ ಹಿರ್ತಡ್ಕ, ಪ್ರತಿಷ್ಠ ಮಹೋತ್ಸವ ಸಮಿತಿ ಅಧ್ಯಕ್ಷ ಮಧುಕರ ರಾವ್ ಮಚ್ಚಳೆ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಕಜೆ, ನಿಡ್ಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಹೆಬ್ಬಾರ್, ಸ್ವಯಂ ಸೇವಕ ಸಮಿತಿ ಸಂಚಾಲಕ ಪುನೀತ್ ಪಿ. ಗೌಡ, ಮಹಿಳಾ ಸಮಿತಿ ಸಂಚಾಲಕ ವೇದಾವತಿ ಕಜೆ ಉಪಸ್ಥಿತರಿದ್ದರು.
ಅಹಲ್ಯ ಬೆಂಡೆ ಪ್ರಾರ್ಥಿಸಿದರು. ಜನಾರ್ಧನ ಕಜೆ ಪ್ರಾಸ್ಥಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿ ಸಂಚಾಲಕ ಚಂದ್ರಶೇಖರ ಗೌಡ ಕಜೆ ಸ್ವಾಗತಿಸಿದರು. ಸ್ವಾಗತ ಸಮಿತಿ ಸಹ ಸಂಚಾಲಕ ಡಾ. ಪ್ರಜ್ವಲ್ ಕಜೆ ಕಾರ್ಯಕ್ರಮ ನಿರೂಪಿಸಿದರು. ಸ್ಥಾಯಿ ಸದಸ್ಯ ಕೃಷ್ಣ ಮೋಹನ್ ದಾಯಿಲಾಟ ವಂದಿಸಿದರು.