Site icon Suddi Belthangady

ಮಡಂತ್ಯಾರ್ ನಲ್ಲಿ ಸರ್ವಧರ್ಮಿಯರು ನಿರ್ಮಿಸಿದ ಕ್ರಿಸ್ಮಸ್ ಗೋದಲಿ

ಮಡಂತ್ಯಾರು : ಇಲ್ಲಿಯ ಪೇಟೆಯಲ್ಲಿ ಸರ್ವಧರ್ಮಿಯರು ಸೇರಿಕೊಂಡು ಏಸು ಹುಟ್ಟಿದ ಸ್ಥಳ(ಗೋದಲಿ) ನಿರ್ಮಿಸಿ ಮೆಚ್ಚುಗೆಗೆ ಪಾತ್ರವಾಗಿದೆ.
ಎಲ್ಲರೂ ಎಲ್ಲರ ಹಬ್ಬವನ್ನು ಒಟ್ಟಿಗೆ ಸೇರಿ ಆಚರಿಸಿದರೆ ಎಷ್ಟೊಂದು ಅನ್ಯೋನ್ಯವಾಗಿ ಜೀವಿಸಬಹುದು ಈಗಿನ ಕಾಲದಲ್ಲಿ ಒಂದು ಧರ್ಮದವರನ್ನು ನೋಡಿದರೆ ಇನ್ನೊಂದು ಧರ್ಮಕ್ಕೆ ಆಗದಿರುವ ಈ ಸಂದರ್ಭದಲ್ಲಿ ಹಿಂದೂ ಬಾಂಧವರು, ಮುಸ್ಲಿಂ, ಕ್ರೈಸ್ತರು ಸೇರಿಕೊಂಡು ಮಡಂತ್ಯಾರಿನಲ್ಲಿ ಭಕ್ತಿ ಭಾವದಿಂದ ಅವರವರು ಕೆಲಸ ಮುಗಿಸಿಕೊಂಡು ಸಂಜೆ ಬಂದು, ಮಡಂತ್ಯಾರು ಪೇಟೆಯಲ್ಲಿ ಸಂಜೆ 6 ಗಂಟೆಯಿಂದ ರಾತ್ರಿ 12 ಗಂಟೆ ವರೆಗೆ ಕೇವಲ 10 ದಿನದಲ್ಲಿ ಅಚ್ಚುಕಟ್ಟಾಗಿ ಪರಿಸರ ಸ್ನೇಹಿ ಗೋದಲಿಯನ್ನು ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ.

ಪ್ರವೀಣಾನವರ ಮನದಾಸೆಯಂತೆ ತನ್ನ 5 ಸೆಂಟ್ಸ್ ಮನೆಯಲ್ಲಿ ವಾಸವಿದ್ದು ಸ್ಥಳದ ಕೊರತೆ ಇದ್ದು. ಮಾಜಿ ತಾ.ಪಂ. ಸದಸ್ಯ ಜೋಯಲ್ ಮೆಂಡೋನ್ಸಾ ನೊಂದಿಗೆ ವಿಚಾರಿಸಿದಾಗ ಸ್ಥಳ ವ್ಯವಸ್ಥೆ ಮಾಡಿದ್ದಾರೆ.
ಇಲ್ಲಿ ಏಸುಕ್ರಿಸ್ತರು ಹುಟ್ಟಿದ ಪರಿಸರ, ಕೃತಕ ಹುಲ್ಲು, ಮೇವು, ಬಿತ್ತನೆ ಬೀಜ, ನೇಜಿ ನಾಟಿ, ದನ, ಕರು, ಪಾರಿವಾಳ, ಟರ್ಕಿಕೋಳಿ, ಸುಂದರವಾಗಿ ನಿರ್ಮಿಸಲಾಗಿದೆ.

ಪ್ರವೀಣ್ ಪೂಜಾರಿ, ಸಂತೋಷ್ ಹೆಗ್ಡೆ, ಸೋಮಯ್ಯ, ಅರುಣ್, ಶಿವರಾಜ್ ಪೂಜಾರಿ, ಆಸಿಫ್, ಶಿವಾರಾಜ್ ಆಚಾರ್ಯ, ಸುರೇಶ್, ಪ್ರವೀಣ್, ಸಾಗರ್, ಸುಜಿತ್, ಗುರು ಸಹಕಾರ ನೀಡಿ ಗೋದಲಿ ರಚಿಸುವಲ್ಲಿ ಸಹಕರಿಸಿದ್ದಾರೆ. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ವಂ.ಫಾ| ಬೆಸಿಲ್‌ವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.

Exit mobile version