Site icon Suddi Belthangady

ಇಳಂತಿಲ ಗ್ರಾಮ ಪಂಚಾಯತ್ ನಲ್ಲಿ ವಿಕಲ ಚೇತನರ ಗ್ರಾಮ ಸಭೆ

ಇಳಂತಿಲ :ಇಳಂತಿಲ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಡಿ. 28 ರಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಿಕಾ ಭಟ್ ಅಧ್ಯಕ್ಷತೆ ಯಲ್ಲಿ ವಿಕಲಚೇತನರ ಗ್ರಾಮ ಸಭೆ ನಡೆಯಿತು.

ಈ ಸಭೆಯಲ್ಲಿ ವಿಶೇಷ ಚೇತನರ ಪೋಷಕರು ಹಾಗೂ ವಿಶೇಷ ಚೇತನರು ಹಾಗೂ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯ ಕರ್ತರು, ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕ ವೃಂದದವರು, ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು, ಪಂಚಾಯತ್ ಸದಸ್ಯರು ಪಂಚಾಯತ್ ಸಿಬ್ಬಂದಿವರ್ಗದವರು ಒಟ್ಟು 80 ಜನ ಭಾಗಿಯಗಿದ್ದರು.

ವಿಕಲಚೇತನರಿಗೆ ಸರ್ಕಾರ ಸೌಲಭ್ಯ ಮಾಹಿತಿ ನೀಡಿ ಹಾಗೂ ಕುಂದು ಕೊರತೆಗಳ ಬಗ್ಗೆ ವಿಚಾರಿಸಿ ಪರಿಹಾರ ಕಂಡುಕೊಳ್ಳುವ ಪ್ರಕ್ರಯೆಯನ್ನು ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆ ಹಾಗೂ ಸರ್ಕಾರಕ್ಕೆ ಪತ್ರವ್ಯವಹಾರದ ಮುಖಾಂತರ ತಿಳಿಸುವುದಾಗಿ ನಿರ್ಣಯಿಸಲಾಯಿತು.

ಈ ಸಭೆಯಲ್ಲಿ ಸರಕಾರದಿಂದ ಸಿಗುವ ಯೋಜನೆಗಳ‌ ಬಗ್ಗೆ ಬೆಳ್ತಂಗಡಿ ತಾಲೂಕು ವಿವಿದ್ದೊದ್ದೇಶ ಪುನರ್ವಸತಿ ಸಂಯೋಜಕರು ಜಾನ್ ಬಾಪ್ಟಿಸ್ಟ್ ಡಿಸೋಜ ವಿಶೇಷಚೇತನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿ ಕೊಂದು ಕೊರತೆ ಬಗ್ಗೆ ಚರ್ಚಿಸಿ ಮಾಹಿತಿ ನೀಡಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಕುಮಾರಿ ರಾಧಿಕಾ ವಿಶೇಷ ಚೇತನರ ವಾರ್ಷಿಕ ವರದಿ ನೀಡಿದರು. ಚೆನ್ನಪ್ಪ ನಾಯ್ಕ ಬಿ. ಸ್ವಾಗತಸಿ ವಂದಿಸಿದರು. ಗ್ರಾಮೀಣ ಆರೋಗ್ಯ ನಿರೀಕ್ಷಣಾಧಿಕಾರಿ ರಕ್ಷಿತ್ ಎಂಡೊಸಲ್ಪಾನ್ ಪೀಡಿತರ ಆರೋಗ್ಯದ ಬಗ್ಗೆ ಸೌಲಭ್ಯದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

Exit mobile version