Site icon Suddi Belthangady

ಮಡಂತ್ಯಾರು: ವಿಕಲಚೇತನರ ವಿಶೇಷ ಗ್ರಾಮ ಸಭೆ

ಮಡಂತ್ಯಾರು: 2021-22ನೇ ಸಾಲಿನ ವಿಕಲಚೇತನರ ವಿಶೇಷ ಗ್ರಾಮ ಸಭೆಯು ಡಿ.28 ರಂದು ಮಡಂತ್ಯಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರುಗಿತು. ನೋಡೆಲ್ ಅಧಿಕಾರಿಯಾಗಿ ಪುನರ್‌ವಸತಿ ಕಾರ್ಯಕರ್ತೆ ದಿವ್ಯ ವಿಕಲ ಚೇತನರಿಗೆ ನೀಡುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಶಿಪ್ರಭಾ, ಉಪಾಧ್ಯಕ್ಷೆ ಸಂಗೀತಾ ಶೆಟ್ಟಿ, ಪಂ. ಅ. ಅಧಿಕಾರಿ ಪುರುಷೋತ್ತಮ ಜಿ., ಕಾರ್ಯದರ್ಶಿ ಮೋರ್ಲಿನ್ ಕ್ರಿಸ್ತಿನ್ ಡಿಸೋಜ, ಸದಸ್ಯರಾದ ಗೋಪಾಲಕೃಷ್ಣ, ಶೈಲೇಶ್ ಕುಮಾರ್, ಕಿಶೋರ್ ಕುಮಾರ್ ಶೆಟ್ಟಿ, ರಾಜೀವ, ಹನೀಫ್, ಮೋಹಿನಿ, ಪಾರ್ವತಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Exit mobile version