Site icon Suddi Belthangady

ಕುಲಾಲರ ಸಂಘದ ಸಭೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ


ಅರಸಿನಮಕ್ಕಿ: ಇಲ್ಲಿಯ ಮೂಲ್ಯರ ಯಾನೆ ಕುಲಾಲರ ಸಂಘದ ಮಾಸಿಕ ಸಭೆಯು ಡಿ,26ರಂದು ಉಡ್ಯೆರೆ ಐತ್ತಪ್ಪ ಕುಲಾಲರ ನಿವಾಸದಲ್ಲಿ ಸಂಘದ ಅಧ್ಯಕ್ಷರಾದ ಗಂಗಾಧರ.ಕೆ.ಕುಲಾಲರ ಅದ್ಯಕ್ಷತೆಯಲ್ಲಿ ನಡೆಯಿತು.

ಜನಾರ್ಧನ ಕುಲಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.ಕಟ್ಟಡನಿಧಿ ಅದ್ಯಕ್ಷರಾದ ಕೃಷ್ಣಪ್ಪ ಕೆ.ಕುಲಾಲ್ ,ನಿಧಿಯ ಅದ್ಯಕ್ಷ ಕೃಷ್ಣಪ್ಪ ಯು. ಕುಲಾಲ್ ವೇದಿಕೆಯಲ್ಲಿ ಉಪಸ್ಧಿತಿದ್ಧರು.

ಜನವರಿ 8 ರಂದು ನಡೆಯುವ ಸಂಘದ ಮಹಾಸಭೆಯ ಆಮಂತ್ರಣ ಪತ್ರಿಕೆ ಯನ್ನು ಸಂಘದ ಅಧ್ಯಕ್ಷರು ಬಿಡುಗಡೆಗೊಳಿಸಿದರು.ಕು.ಧನ್ಯ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಣಾಮ್ ಕುಲಾಲ್ ಸ್ವಾಗತಿಸಿದರು.ಕಾರ್ಯದರ್ಶಿ ಹೃಷಿಕೇಶ್ ಕುಲಾಲ್ ವರದಿ ವಾಚಿಸಿದರು.ರಂಜಿತ್ ಕುಲಾಲ್ ವಂದಿಸಿದರು. ನಿಧಿಯ ಕಾರ್ಯದರ್ಶಿ ಪ್ರವೀಣ್ ಕುಲಾಲ್ ಮತ್ತು ಸಂಘದ ಪ್ರಧಾನ ಕಾರ್ಯದರ್ಶಿ ಯು.ಸಿ.ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

Exit mobile version