ಅರಸಿನಮಕ್ಕಿ: ಅರಸಿನಮಕ್ಕಿ ಗ್ರಾ.ಪಂ ನಲ್ಲಿ ಶಿವಾನಿ ಸಂಜೀವಿನಿ ಒಕ್ಕೂಟದ ಹಾಗೂ ಗ್ರಾ.ಪಂ ವತಿಯಿಂದ ಕಾಳುಮೆಣಸು ಉತ್ಪಾದಕ ಗುಂಪಿನ ಉದ್ಘಾಟನಾ ಕಾರ್ಯಕ್ರಮವು ಡಿ.27ರಂದು ನಡೆಯಿತು.
ಪಂಚಾಯತ್ ಸದಸ್ಯರು ಹಾಗೂ ಕಾಳುಮೆಣಸು ಉತ್ಪಾದಕ ಗುಂಪಿನ ಅಧ್ಯಕ್ಷ ಕಾರ್ಯದರ್ಶಿ ಹಾಗೂ ತಾಲೂಕು ವ್ಯವಸ್ಥಾಪಕರಾದ ವಿನುತ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ವಿನುತ್ ರವರು ಕಾಳುಮೆಣಸು ಉತ್ಪಾದಕ ಗುಂಪಿನ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಸ್ವ ಉದ್ಯೋಗ ಮಾಡುವ ಕ್ರಮಗಳ ಬಗ್ಗೆ ತಿಳಿಸಿದರು.
ಹಾಗೆಯೇ ಲಿಂಗತ್ವಧಾರಿತ ದೌರ್ಜನ್ಯದ ಬಗ್ಗೆ ಹಾಗೂ ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸುವುದರ ಬಗ್ಗೆ , ಪೋಷಕರ ಬಗ್ಗೆ ವಿವರವಾಗಿ ತಿಳಿಸಿದರು. ತಾಲೂಕು ಮೇಲ್ವಿಚಾರಕರಾದ ಜಯನಂದ ಹಾಗೂ ಸ್ವಸ್ಥಿಕ್ ರವರು ಸಂಜೀವಿನಿ ಒಕ್ಕೂಟದ ಕಾರ್ಯವೈಖರಿ ಬಗ್ಗೆ ವಿಸ್ತಾರವಾಗಿ ವಿವರಿಸಿದರು. ಹಾಗೂ ಶಿವಾನಿ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆಯನ್ನು ನಡೆಸಲಾಯಿತು.ಅನೇಕ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯತ್ ಪಂ ಅಭಿವೃದ್ಧಿ ಅಧಿಕಾರಿ, ಪಂ ಸದಸ್ಯರಾದ ಸೌಮ್ಯ ಹಾಗೂ ಲಾವಣ್ಯರವರು ಉಪಸ್ಥಿತರಿದ್ದು ಗುಂಪಿನ ಸದಸ್ಯರಿಗೆ ಶುಭಹಾರೈಸಿದರು. ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಹಾಗೂ ಸಂಘದ ಪ್ರತಿ ಸಂಘ ಅಧ್ಯಕ್ಷ/ಕಾರ್ಯದರ್ಶಿ, ಸದಸ್ಯರು ಎಂ.ಬಿ.ಕೆ ಎಲ್ ಆರ್ ಪಿಯವರು ಅಂಗನವಾಡಿ ಕಾರ್ಯಕರ್ತೆಯರು, ಪಶು ಸಖಿ, ಕೃಷಿ ಉದ್ಯೋಗ ಸಖಿ ಯವರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಕೌಸಲ್ಯರವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, ಹೇಮಲತಾರವರು ಅತಿಥಿಗಳನ್ನು ಸ್ವಾಗತಿಸಿದರು. ರೇವತಿಯವರು ನಿರೂಪಣೆ ಮಾಡಿ, ವೇದಾವತಿಯವರು ಧನ್ಯವಾದಗೈದರು.