Site icon Suddi Belthangady

ನಿಡ್ಲೆ: ಶಾಲಾ ಪ್ರವಾಸ ಬಸ್ ಹಾಗೂ ಕೆಎಸ್ ಆರ್ ಟಿಸಿ ಬಸ್ ನಡುವೆ ಅಪಘಾತ: ಎರಡೂ ಬಸ್ ಚಾಲಕರು ಗಂಭೀರ

ನಿಡ್ಲೆ: ಇಲ್ಲಿಯ ಬೂಡುಜಾಲು ಎಂಬಲ್ಲಿ ಸಿಂದನೂರಿನ ಶಾಲಾ ಮಕ್ಕಳ ಪ್ರವಾಸ ಬಸ್, ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದು, ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಮುಖಾಮುಖಿ

ಡಿಕ್ಕಿ ಹೊಡೆದ ಘಟನೆ ಡಿ.27ರಂದು ಮಧ್ಯಾಹ್ನ ನಡೆದಿದೆ.

ಎರಡೂ ಬಸ್ಸಿನ ಚಾಲಕರಿಗೆ ಗಂಭೀರವಾದ ಗಾಯಗಳಾಗಿದ್ದು, ಕೂಡಲೇ ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಸ್ವಯಂ ಸೇವಕ ಮನೋಹರ್ ತನ್ನ ಕಾರಿನಲ್ಲಿ ನೆಲ್ಯಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಳಿದ ಗಾಯಾಳುಗಳನ್ನು ಶೌರ್ಯ ವಿಪತ್ತು ತಂಡದ ತಾಲೂಕು ಮಾಸ್ಟರ್ ಸ್ನೇಕ್ ಪ್ರಕಾಶ್, ಸ್ವಯಂ ಸೇವಕರಾದ ನಳೀನ್, ಸತೀಶ್ ಆಚಾರಿ, ಕೊರಗಪ್ಪ ಗೌಡ, ಗಿರೀಶ್ ಗೌಡ ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದಾರೆ. ಘಟನೆ ವೇಳೆ ರಸ್ತೆಯ ಎರಡೂ ಭಾಗದಲ್ಲೂ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

Exit mobile version