ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ದಿ ಯೋಜನೆ ಬಿ.ಸಿ (ರಿ)ಗುರುವಾಯನಕೆರೆ, ನಾರಾವಿ ವಲಯ ವತಿಯಿಂದ ಮರೋಡಿ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಕ್ಷೇತ್ರದ ವತಿಯಿಂದ ಮಂಜೂರಾದ 2 ಲಕ್ಷ ರೂಪಾಯಿ ಮೊತ್ತದ ಮಂಜೂರಾತಿ ಪತ್ರವನ್ನು ವಲಯ ಮೇಲ್ವಿಚಾರಕರಾದ ದಮಯಂತಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮಶ್ರೀ ಜೈನ್, ಗ್ರಾಮ ಪಂಚಾಯತ್ ಸದಸ್ಯರಾದ ರತ್ನಾಕರ ಬುಣ್ಣನ್ ಇವರುಗಳು ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳಿಗೆ ಮಂಜೂರಾತಿ ಪತ್ರವನ್ನು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಮರೋಡಿ “ಎ” ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಹಾಗೂ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷರಾದ ಶಶಿಕಲಾ ವಿ.ಬಿ ಮತ್ತು ನಿರ್ದೇಶಕರಾದ ಚಂದ್ರವತಿ, ವನಿತಾ,, ಶಶಿಕಲಾ,ಬೇಬಿ ಹಾಗೂ ಮಾಜಿ ವಲಯಾಧ್ಯಕ್ಷರಾದ ಯಶೋಧರ ಬಂಗೇರ, ಒಕ್ಕೂಟದ ಪದಾಧಿಕಾರಿಗಳಾದ ಲೋಲಾಕ್ಷಿ, ಹರೀಶ್, ಸುದರ್ಶನ್, ವಿಶ್ವನಾಥ್, ಒಕ್ಕೂಟದ ಸರ್ವಸದಸ್ಯರು ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ಶಶಿಕಲಾ ಸ್ವಾಗತ ನೀಡಿ ವಂದನಾರ್ಪಣೆ ಗೈದರು.