Site icon Suddi Belthangady

ಉಜಿರೆ: ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘ(ನಿ)ಪ್ರಧಾನ ಕಚೇರಿಯಲ್ಲಿ ಕ್ರಿಸ್ಮಸ್ ಆಚರಣೆ

ಉಜಿರೆ: ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಉಜಿರೆ ಇದರ ಪ್ರಧಾನ ಕಚೇರಿಯಲ್ಲಿ ಕ್ರಿಸ್ಮಸ್ ಆಚರಣೆಯನ್ನು ಡಿ.23 ರಂದು ಆಚರಿಸಲಾಯಿತು.

ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ದೀಪ ಬೆಳಗಿಸುವ ಮುಖಾಂತರ ಆಚರಣೆಗೆ ಚಾಲನೆ ನೀಡಿದರು. ಕ್ರಿಸ್ಮಸ್ ಆಚರಣೆಯಲ್ಲಿ ನಿರ್ದೇಶಕರಿಗೆ ವಿವಿಧ ಆಟೊಟ ಸಂಘದ ಸಿಬ್ಬಂಧಿಗಳು ಏರ್ಪಡಿಸಿದ್ದರು. ಸಭೆಯಲ್ಲಿ ಸಂಘದ ಅಧ್ಯಕ್ಷರು ಕ್ರಿಸ್ಮಸ್ ಸಂದೇಶವನ್ನು ಸಾರಿದರು. ಸಂಘದ ಸಿಬ್ಬಂದಿಗಳು ಕ್ರಿಸ್ಮಸ್ ಕ್ಯಾರಲ್ಸನ್ನು ಗಾಯನ ಮಾಡಿದರು. ಸಂಘದ ಅಧ್ಯಕ್ಷರು ಎಲ್ಲಾ ನಿರ್ದೇಶಕರಿಗೆ ಮತ್ತು ಸಿಬ್ಬಂದಿಗಳಿಗೆ ಕ್ರಿಸ್ಮಸ್ ಉಡುಗೊರೆಯನ್ನು ವಿತರಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಕಾರ್ಯನಿರ್ವಣೆ ಮಾಡಿ ಸಂಘದ ಸಿಬ್ಬಂದಿ ಪ್ರವೀಣ್ ಪಿಂಟೋ ರವರು ವಂದಿಸಿದರು.

Exit mobile version