ಬೆಳ್ತಂಗಡಿ:ಓಡಿಲ್ನಾಳ ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಬೆಳ್ತಂಗಡಿ ನಗರ ಕಳಿಯ.ನ್ಯಾಯತರ್ಪ.ಮಚ್ಚಿನ ಕುವೆಟ್ಟು . ಪಡಂಗಡಿ.ಸೊಣಂದೂರು.ಓಡಿಲ್ನಾಳ ಗ್ರಾಮಸ್ಥರಿಂದ ಹೊರ ಕಾಣಿಕೆಯ ಭವ್ಯ ಶೋಭೆ ಯಾತ್ರೆ ವು ಡಿ.25ರಂದು ನಡೆಯಿತು.
ರೈತಬಂಧು ಆಹಾರೋದ್ಯಾಮದ
ಮಾಲಕ ಶಿವಶಂಕರ್ ನಾಯಕ್ ರವರು ರೇಷ್ಮೆ ರೋಡು ನಿಂದ ಹಸುರು ಹೊರಕಾಣಿಕೆಗೆ ಚಾಲನೆ ನೀಡಿದರು.
ಬ್ರಹ್ಮ ಕಲ,ಶೋತ್ಸವ ಸಮಿತಿ ಅಧ್ಯಕ್ಷರಾದ ಶಾಸಕ ಹರೀಶ್ ಪೂಂಜಾರವರಿಗೆ ಹಸುರು ಹೊರೆ ಕಾಣಿಕೆ ಸಮಿತಿಯವರು ಫಲಪುಷ್ಪ ತಾಂಬೂಲ ನಿಡಿ ವಿವಿಧ ಕಡೆಗಳಿಂದ ತಂದ ಹೊರಕಾಣಿಕೆಯನ್ನು ಸಮರ್ಪಿಸಲಾಯಿತು. ಬ್ರಹ್ಮ ಕಲಶೋತ್ಸವ ದ ಕಛೇರಿಯನ್ನು ಬೆಳ್ತಂಗಡಿವಿನಾಯಕ್ ರೈಸ್ ಮಿಲ್ ಮಾಲಕ ಶ್ರೀಕಾಂತ್ ಉದ್ಘಾಟಿಸಿದರು.ಉಗ್ರಾಣವನ್ನು ಬಾಲಕ್ರಷ್ಟ ಸಿ.ನಾಯಕ್ ಉದ್ಘಾಟಿಸಿದರು.
ಬರೋಡಾದ ಉದ್ಯಮಿ ಶಶಿಧರ್ ಶೆಟ್ಟಿ, ದಿಲ್ಲಿಯ ಉದ್ಯಮಿ ಪ್ರಭಾಕರ ಶೆಟ್ಟಿ ,ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ಓಡಿಲು ದೇವಾಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಪಡಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೀನಾಕ್ಷಿ, ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ ,ಕಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜನಾರ್ಧನ ಗೌಡ, ಕಾರ್ಯಾಧ್ಯಕ್ಷರಾದ ರಾಜ ಪ್ರಕಾಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಕೆ ಜೈನ್, ಕೋಶಾಧಿಕಾರಿ ಮನೋಹರ್ , ಜೀರ್ಣೋದ್ಧಾರ ಕೋಶಾಧಿಕಾರಿ ಗೋಪಾಲ ಶೆಟ್ಟಿ, ಓಡಿಲ್ನಾಳ ಧರ್ಮೋತ್ಥಾನಟ್ರಸ್ಟ್ ಅಧ್ಯಕ್ಷರಾದ ವೃಷಭ ಆರಿಗ, ಪವಿತ್ರವಾಣಿ ಮೋಹನ್ ಕೆರ್ಮಣ್ಣಾಯ, ಯುವ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯಾ, ನಾಳೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಭುವನೇಶ್ ಮುಂತಾದರೂ ಉಪಸ್ಥಿತರಿದ್ದರು.