ಬೆಳ್ತಂಗಡಿ: ಹೋಲಿ ರಿಡೀಮರ್ ಚರ್ಚ್ ಬೆಳ್ತಂಗಡಿ ಕ್ರಿಸ್ತ ರಾಜ ವಾಳೆ ಇದರ ಆಶ್ರಯದಲ್ಲಿ ನಡೆದ “ಕ್ರಿಸ್ಮಸ್ ಸೌಹಾರ್ಧ ವೇದಿಕೆ 2022 “ಕಾರ್ಯಕ್ರಮ ರೆಂಕೆದಗುತ್ತು ಇಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು . ಜೊಯೆಲ್ ಪ್ರೀತಮ್ ರೆಗೋರವರು ದೀಪ ಬೆಳಗಿಸುವ ಮೂಲಕ ನೆರವೇರಿಸಿಕೊಟ್ಟು, ಪ್ರಾಸ್ತವಿಕ ನುಡಿಗಳನ್ನು ಆಡಿದರು.ಪುಟಾಣಿ ಮಕ್ಕಳು ಸ್ವಾಗತ ನೃತ್ಯ ನೆರವೇರಿಸಿಕೊಟ್ಟರು.ಮುಖ್ಯ ಅತಿಥಿಗಳಾದ ವo. ಸ್ವಾಮಿ ಕ್ಲಿಫರ್ಡ್ ಪಿಂಟೋ, ಗಣೇಶ್ ಐತಾಳ್, ಮೊಹಮ್ಮದ್ ಇಸಾಕ್ ಅಲ್ ಫಾಝಿಲ್ ಕೌಸರಿ ತಮ್ಮ ಭಾಷಣದಲ್ಲಿ ವಿವಿಧ ಧರ್ಮಗಳ ನಡುವಿನ ಸೌಹಾರ್ದತೆಯನ್ನು ಮೆರೆದರು. ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು.
ವೇದಿಕೆಯಲ್ಲಿ ಶ್ರೀಮತಿ ಪೌಲಿನ್ ರೇಗೋ, ಸಿ. ಲಿನಾ ಡಿಸೋಜ, ಶ್ರೀ ಪೀಲಿಪ್ ಡಿಸೋಜಾ, ಶ್ರೀಮತಿ ಜೂಲಿಯೆಟ್ ಪಾಯ್ಸ್ ಉಪಸ್ಥಿತರಿದ್ದರು ಫಿಲಿಪ್ ಡಿಸೋಜಾ ಆಗಮಿಸಿದ ಸರ್ವರನ್ನು ಸ್ವಾಗತಿಸಿ, ವಾಲ್ಟರ್ ಮೋನಿಸ್ ವಂದಿಸಿದರು, ಶ್ರೀಮತಿ ಸಿಸಿಲಿಯ ಫೆರ್ನಾಂಡಿಸ್ ಕಾರ್ಯನಿರೂಪಣೆ ಮಾಡಿದರು ಸಂಸ್ಕೃತಿಕ ಕಾರ್ಯಕ್ರಮವನ್ನು ವಾಳೆಯ ಸದಸ್ಯರು ನಾಟಕ ಹಾಗೂ ನ್ರತ್ಯದ ಮೂಲಕ ನೆರವೇರಿಸಿ ಕೊಟ್ಟರು.