ಉಜಿರೆ :ಕರ್ನಾಟಕ ಸರಕಾರ ದ. ಕ. ಜಿ. ಪಂ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸರಕಾರಿ ಉನ್ನತೀಕರಿಸಿದ ಪಾಥಮಿಕ ಶಾಲೆ ಬದನಾಜೆ,ಸರಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಎ.) ಬದನಾಜೆ ಇಲ್ಲಿಯ ಪ್ರೌಢ ಶಾಲಾ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮತ್ತು ಶಾಲಾ ವಾರ್ಷಿಕೋತ್ಸವ ಡಿ.24 ರಂದು ನಡೆಯಿತು.
ನೂತನ ಕಟ್ಟಡವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಆರ್. ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಪಂಚಾಯತ್ ಸದಸ್ಯರುಗಳಾದ ಬಿ. ಎಂ. ಇಲ್ಯಾಸ್,ಅನಿಲ್ ಡಿ ಸೋಜ, ಲಲಿತ, ಸವಿತಾ, ಮಂಜುನಾಥ, ಗುರುಪ್ರಸಾದ್ ಕೋಟ್ಯಾನ್, ಶೀನ ನಾಯ್ಕ, ನಾಗವೇಣಿ, ಅಕ್ಷರ ದಾಸೋಹ ನಿರ್ದೇಶಕಿ ತಾರಾಕೇಸರಿ, ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಲಕ್ಷ್ಮಣ ಪೂಜಾರಿ, ಪ್ರೌಢ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾ ಎಂ., ನಿವೃತ್ತ ಶಿಕ್ಷಕ ಬಾಬು ಗೌಡ ಬಾಜಿಮಾರ್, ಕಾರ್ಯಪಾಲ ಅಭಿಯ0ತರ ಮಿಥುನ್,ಕಟ್ಟಡದ ಗುತ್ತಿಗೆದಾರ ಗಿರಿರಾಜ ಬಾರಿತ್ತಾಯ, ರಾಮಯ್ಯ ಗೌಡ ಮಾಚಾರು,ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ವಿನುತಾ ರಜತ ಗೌಡ, ಕುಂಟಲಪಲ್ಕೆ ಶಾಲಾ ಮುಖ್ಯ ಶಿಕ್ಷಕ ಸುರೇಶ ಮಾಚಾರು,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನ ಗೌಡ ಪರಂಗಾಜೆ ಸ್ವಸ್ತಿ ವಚನ ಗೈದರು. ಇದೇ ಸಂದರ್ಭದಲ್ಲಿ ವಿನುತಾ ರಜತ ಗೌಡ ನಿರ್ಮಿಸಿ ಕೊಟ್ಟ ನೂತನ ಧ್ವಜ ಸ್ತ0ಭವನ್ನು ಶಾಸಕ ಉದ್ಘಾಟಿಸಿದರು,ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಜಮುನಾ ಕೆ. ಎಸ್. ಸ್ವಾಗತಿಸಿದರು, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಕಿ ಶಾರದಾ ವರದಿ ವಾಚಿಸಿದರು, ಶಿಕ್ಷಕಿ ಮೇಧಾ ಕೆ. ನಿರೂಪಿಸಿದರು,ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರು, ಪ್ರಗತಿ ಯುವಕ ಮಂಡಲ, ಪ್ರಗತಿ ಯುವತಿ ಮಂಡಲ, ಲಕ್ಷ್ಮಿ ನಾರಾಯಣ ಭಜನಾ ಮಂಡಳಿ, ಹಳೆ ವಿದ್ಯಾರ್ಥಿ ಸಂಘ ದ ಪದಾಧಿಕಾರಿಗಳು ಸದಸ್ಯರು,ವಿದ್ಯಾಭಿಮಾನಿಗಳು, ಊರವರು,. ಭಾಗವಹಿಸಿದ್ದರು, ಬಳಿಕ ವಿವಿಧ ಸಾಂಸ್ಕೃಕ ಕಾರ್ಯಕ್ರಮ ನಡೆಯಿತು.