ಮಡಂತ್ಯಾರು: ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ದಿಮೆದಾರರ ಸಂಘ ( ರಿ)ಇದರ ವತಿಯಿಂದ ವರ್ತಕ ಸಮಾಲೋಚನಾ ಸಭೆ ಇತ್ತೀಚೆಗೆ ಮಡಂತ್ಯಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಈ ಸಭೆಯಲ್ಲಿ ಮಡಂತ್ಯಾರು ಮಾಲಾಡಿ ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಜರಿದ್ದರು.ಈ ಸಭೆಯಲ್ಲಿ ಪರಿಸರದ ಹೆಚ್ಚಿನ ವರ್ತಕರು ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಕುರಿತು ತಮ್ಮ ಮನದಾಳದ ನೋವನ್ನು ಹಂಚಿಕೊಂಡರು.
ಈ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು.
1 ಅಭಿವೃದ್ಧಿಯ ದೃಷ್ಟಿಯಲ್ಲಿ ಕೈಗೊಳ್ಳುತ್ತಿರುವ ಹೆದ್ದಾರಿ ಕಾಮಗಾರಿಗೆ ಸಂಪೂರ್ಣ ಬೆಂಬಲ ನೀಡುವುದು.
2 ಪ್ರತಿಯೊಬ್ಬ ಸಂತ್ರಸ್ತ ವರ್ತಕರಿಗೆ ಗರಿಷ್ಠ ಮಟ್ಟದ ಪರಿಹಾರ ದೊರಕಿಸಿಕೊಳ್ಳುವಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುವುದು.
3 ಈ ಬಾರಿ ನಡೆದ ಸರ್ವೆಕಾರ್ಯವು ಸಮರ್ಪಕವಾಗಿಲ್ಲ ಎಂಬುದಾಗಿ ಜನಪ್ರತಿನಿಧಿಗಳಿಗೆ ಮತ್ತು ಹೆದ್ದಾರಿ ಪ್ರಾದಿಕಾರಕ್ಕೆ ಮನವಿಯನ್ನು ಸಲ್ಲಿಸುವುದು.
4 ಕಾಮಗಾರಿಗೆ ಮುನ್ನವೇ ಸಂತಸ್ಥರಿಗೆ ಯೋಗ್ಯ ಪರಿಹಾರಕ್ಕೆ ಒಗ್ಗಟ್ಟಿನಿಂದ ಬೇಡಿಕೆ ಸಲ್ಲಿಸುವುದು.
5 ಹೆದ್ದಾರಿ ಕಾಮಗಾರಿಯ ಬಗ್ಗೆ ಸಮರ್ಪಕವಾದ ಮಾಹಿತಿಯನ್ನು ಆದಷ್ಟು ಬೇಗನೆ ಒದಗಿಸಿ ಗೊಂದಲಗಳನ್ನು ನಿವಾರಿಸಲು ಸಂಬಂಧಪಟ್ಟ ಇಲಾಖೆಗೆ ಒತ್ತಡ ತರುವುದು.
6 ಇಷ್ಟರವರೆಗೆ ಆದ ಸರ್ವೆ ಮತ್ತು ಇತರ ತಾಂತ್ರಿಕ ಕೆಲಸಗಳ ಮಾಹಿತಿಗಳನ್ನು ಮಾಹಿತಿ ಹಕ್ಕಿನಲ್ಲಿ ಕೇಳುವುದು.
7 ಎಲ್ಲಾ ಹಂತದಲ್ಲಿಯೂ ವರ್ತಕರು ಒಗ್ಗಟ್ಟಿನಿಂದ ಇದ್ದು ನ್ಯಾಯಯುತ ಹೋರಾಟವನ್ನು ಮಾಡುವುದು.
8 ಪರಿಹಾರದ ಮೊತ್ತ ಪಡೆದುಕೊಳ್ಳುವ ಸಂದರ್ಭದಲ್ಲಿ ಯಾವುದೇ ಕಮಿಷನ್ ಅಥವಾ ಲಂಚಗಳನ್ನು ನೀಡದೆ ಗರಿಷ್ಠ ಮಟ್ಟದ ಪರಿಹಾರ ಪಡೆಯುವಲ್ಲಿ ಸಫಲರಾಗುವಂತೆ ಪ್ರಯತ್ನಿಸುವುದು.
9 ಈ ಬಗ್ಗೆ ಉಪ ಸಮಿತಿ ರಚಿಸಿ ಅದರ ಮುಖೇನ ಕಾರ್ಯೋರ್ಮುಖರಾಗುವುದು.
10 ಆದಷ್ಟು ಬೇಗನೆ ಶಾಸಕರು ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮತ್ತು ಸಂಬಂಧ ಪಟ್ಟ ಇಲಾಖೆ ಇಂಜಿನಿಯರ್ ಗಳೊಂದಿಗೆ ಸಂವಾದ ಸಭೆಯನ್ನು ನಡೆಸುವುದು.
ಉಪಸಮಿತಿಗೆ ಆಯ್ಕೆಯಾದ ವರ್ತಕರು
1 ಶ್ರೀಯುತ ಲೋಕೇಶ್ ಆಚಾರ್ಯ ಪುಂಜಾಲಕಟ್ಟೆ .
2 ಶ್ರೀಯುತ ಅನಿಲ್ ಕುಮಾರ್ ಅಧಿಕಾರಿ ಮಡ೦ತ್ಯಾರು
3 ಶ್ರೀ ರಿಚರ್ಡ್ ರೋಡ್ರಿಗಸ್ ಮಡಂತ್ಯಾರು
4 ರಾಜೇಶ್ ರೋಡ್ರಿಗಸ್ ಮಡಂತ್ಯಾರ್
5 ವಿವೇಕ್ ಪೈ ಪುಂಜಾಲಕಟ್ಟೆ .