Site icon Suddi Belthangady

ಮಡಂತ್ಯಾರು ಪೇಟೆಯ ಹೆದ್ದಾರಿ ಪ್ರಾಧಿಕಾರದ ಸರ್ವೆಗೆ ವರ್ತಕ ಸಂಘದಿಂದ ಮತ್ತು ಪೇಟೆಯ ವರ್ತಕರಿಂದ ತಡೆ

ಮಡ೦ತ್ಯಾರು: ಮಡಂತ್ಯಾರು ಪೇಟೆಯಲ್ಲಿ ನಡೆಯುತ್ತಿದ್ದ ಸರ್ವೇ ಕಾರ್ಯಕ್ಕೆ ಡಿ.23ರಂದು ವರ್ತಕರು ಒಗ್ಗಟ್ಟಾಗಿ ತಡೆಯನ್ನು ಮಾಡಿದ್ದಾರೆ. ಈ ಸರ್ವೆಯು ಅಸಮರ್ಪಕವಾಗಿದೆ ಈ ಸರ್ವೇ ಸಮರ್ಪಕವಾಗಿಲ್ಲ ಇದು ಹಲವಾರು ವರ್ತಕರಿಗೆ ತೊಂದರೆಯನ್ನು ನೀಡುತ್ತಿದೆ.ಹೆದ್ದಾರಿ ಪ್ರಾಧಿಕಾರವು ಸಮರ್ಪಕವಾದ ಸರ್ವೇ ಮಾಡಿದಲ್ಲಿ ಹೆದ್ದಾರಿ ಕಾಮಗಾರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿರುತ್ತಾರೆ .

ಅಲ್ಲದೇ ಈ ಬಗ್ಗೆ ತಾಲೂಕಿನ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಎಲ್ಲರನ್ನ ಒಟ್ಟು ಸೇರಿಸಿ ತುರ್ತು ಸಭೆಯನ್ನು ಕರೆಯಲು ಬೇಡಿಕೆಯನ್ನು ಇಟ್ಟಿದ್ದಾರೆ.

Exit mobile version