Site icon Suddi Belthangady

ಜೇಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಪದಪ್ರದಾನ ಸಮಾರಂಭಕ್ಕೆ ಮಡಂತ್ಯಾರು ಘಟಕದಿಂದ ಶುಭಹಾರೈಕೆ

ಮಡಂತ್ಯಾರು: ಜೇಸಿ ಬೆಳ್ತಂಗಡಿ ಮಂಜುಶ್ರೀ ಇದರ ಪದಪ್ರದಾನ ಸಮಾರಂಭದಲ್ಲಿ 2023ನೇ ಸಾಲಿನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಜೇಸಿಐ ಮಡಂತ್ಯಾರು ಘಟಕದಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಘಟಕಾಧ್ಯಕ್ಷರಾದ ಜೇಸಿ ಅಶೋಕ್ ಗುಂಡಿಯಲ್ಕೆ, ಘಟಕದ ನಿಕಟ ಪೂರ್ವಾಧ್ಯಕ್ಷರು, ವಲಯ ಉಪಾಧ್ಯಕ್ಷರಾದ ಜೇಸಿ ಭರತ್ ಶೆಟ್ಟಿ, ಘಟಕದ ಪೂರ್ವಾಧ್ಯಕ್ಷರು ವಲಯ ಸಂಯೋಜಕರಾದ ಜೇಸಿ ನವೀನ್ ಕೋಡ್ಲಕ್ಕೆ, ಪೂರ್ವಾಧ್ಯಕ್ಷರಾದ ಜೇಸಿ ಪ್ರಸನ್ನ ಶೆಟ್ಟಿ, ಘಟಕದ ಕಾರ್ಯದರ್ಶಿ ಜೇಸಿ ವೀಕೇಶ್ ಮಾನ್ಯ, ಸದಸ್ಯರಾದ ಜೇಸಿ ಸಂಯುಕ್ತ ಕಡ್ತಿಲ ಜೇಸಿ ಆದರ್ಶ್ ಹಟ್ಟತ್ತೋಡಿ, ಜೇಸಿ ಶಿಲ್ಪ ಆದರ್ಶ್ ಉಪಸ್ಥಿತರಿದ್ದರು.

Exit mobile version