Site icon Suddi Belthangady

ಉಜಿರೆ ಶ್ರೀ ಧ. ಮ. ಅನುದಾನಿತ ಸೆಕೆಂಡರಿ ಶಾಲೆ ಯಲ್ಲಿ “ರಾಷ್ಟ್ರೀಯ ಗಣಿತ ದಿನಾಚರಣೆ”

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ “ರಾಷ್ಟ್ರೀಯ ಗಣಿತ ದಿನಾಚರಣೆ”ಯು ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. 9ನೇ ತರಗತಿಯ ವಿದ್ಯಾರ್ಥಿ ಪ್ರಮೋದ್ ಸ್ವಾಗತಿಸಿದರು.ಶಿಕ್ಷಕ ಸುರೇಶ್ ರವರು ಪ್ರಾಸ್ತಾವಿಕ ನುಡಿಯೊಂದಿಗೆ ಶ್ರೀನಿವಾಸ ರಾಮಾನುಜನ್ ರವರ ಜನ್ಮ ದಿನವನ್ನು ಗಣಿತ ದಿನವನ್ನಾಗಿ ಆಚರಿಸುವ ಮಹತ್ವದ ಬಗ್ಗೆ ತಿಳಿಸಿದರು.

10ನೇ ತರಗತಿ ವಿದ್ಯಾರ್ಥಿಗಳು ರಾಮಾನುಜನ್ ರ ಕುರಿತು ಸುಶ್ರಾವ್ಯವಾಗಿ ಹಾಡಿದರು.10ನೇ ತರಗತಿಯ ವಿದ್ಯಾರ್ಥಿನಿ ರಚನಾ ರಾಮಾನುಜನ್ ರ ಕುರಿತು ಭಾಷಣ ಮಾಡಿದರು. 9ನೇ ತರಗತಿಯ ವಿದ್ಯಾರ್ಥಿಗಳಾದ ಬಾಲಾಜಿ ಮತ್ತು ಹಸೀನ್ ಗಣಿತಕ್ಕೆ ಸಂಬಂಧಿಸಿದ ಮಾದರಿಗಳನ್ನು ಪ್ರದರ್ಶಿಸಿ ವಿವರಿಸಿದರು.

ಮುಖ್ಯಗುರು ಪದ್ಮರಾಜ್ ಎನ್. ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮೋಜಿನ ಗಣಿತದ ಕೆಲವೊಂದು ರಸಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಕೇಳಿ ದಿನದ ಮಹತ್ವವನ್ನು ತಿಳಿಸಿದರು. 9ನೇ ತರಗತಿಯ ವಿದ್ಯಾರ್ಥಿನಿ ಶ್ರದ್ದಾ ವಂದಾರ್ಪಣೆಗೈದರು.9 ನೇ ತರಗತಿಯ ವಿದ್ಯಾರ್ಥಿನಿ ಅನುಷಾ ಕಾರ್ಯಕ್ರಮದ ನಿರೂಪಿಸಿದರು.

Exit mobile version