Site icon Suddi Belthangady

ಉಜಿರೆ ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಚೇತನರ ಸಮನ್ವ ಗ್ರಾಮ ಸಭೆ


ಉಜಿರೆ :ಉಜಿರೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಆರ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಡಿ.22ರಂದು ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ ಜರುಗಿತು.
ಉಜಿರೆ ಗ್ರಾಮದ ವಿಶೇಷ ಚೇತನರಾದ ಕುಮಾರಿ ಶಮಾ ಇವರಿಗೆ ಪಂಚಾಯತ್ ವತಿಯಿಂದ ಸ್ಟಡಿ ಟೇಬಲ್ ಅನ್ನು ನೀಡಲಾಯಿತು. ಹಾಗೂ 30 ಜನ ವಿಶೇಷ ಚೇತನರಿಗೆ UDID ಕಾರ್ಡ್ ಪ್ರತಿಯನ್ನುವಿತರಿಸಲಾಯಿತು.

80 ಜನ ವಿಶೇಷ ಚೇತನರು ಈ ಸಭೆಯಲ್ಲಿ ಹಾಜರಿದ್ದು ಈ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆಯನ್ನು ಯಶಸ್ವಿ ಗೊಳಿಸಿದರು ಹಾಗೂ ಗ್ರಾಮಸ್ಥ ವಿಶೇಷ ಚೇತನರ ಶ್ರೇಯಾಭಿವೃಧಿಯ ಬಗ್ಗೆ ಚರ್ಚಿಸಿ ಗ್ರಾಮ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳಲಾಯಿತು.

ಗ್ರಾ.ಪಂ ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಪಂಚಾಯತ್ ಸದಸ್ಯರು, ಪಿಡಿಒ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಶ್ರವಣ್, ತಾಲೂಕು ಪಂಚಾಯತ್ ವಿಶೇಷ ಚೇತನರ ವಿವಿಧೋದ್ದೇಶ ಸಂಯೋಜಕ ಜೋನ್ ಬ್ಯಾಪ್ಟಿಸ್ಟ್ , ವಿ.ಅರ್.ಡಬ್ಲ್ಯೂ. ವಿಪುಲ್, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕಿ ಸೀತಾ ಆರ್. ಶೆಟ್, ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ಮೇಲ್ವಿಚಾರಕಿ ಶ್ರೀಮತಿ ಮಲ್ಲಿಕಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ರಾಷ್ಟ್ರ ಪ್ರಶಸ್ತಿ ವಿಜೇತೆ ಅಂಜನಾ ದೇವಿ, ಚಂದ್ರಕಲಾ ಎಸ್ ಡಿ ಎಂ ಸಮಾಜ ಕಾರ್ಯ ವಿಧ್ಯಾರ್ಥಿಗಳು ಉಪಸ್ಥಿತಿತವಿದ್ದು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು .

Exit mobile version