Site icon Suddi Belthangady

ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಎಕ್ಸೆಲ್ ಪರ್ಬ: ಯಾವುದೇ ಸಂಸ್ಥೆಗೂ ಹಿರಿಯ ವಿದ್ಯಾರ್ಥಿಗಳು ನಿಜವಾದ ರಾಯಭಾರಿಗಳು- ಡಾ. ತುಕಾರಾಮ ಪೂಜಾರಿ

ಗುರುವಾಯನಕೆರೆ: ಸ್ಥಳೀಯ ಇತಿಹಾಸ, ಮಹಾಪುರುಷರ ವಿವರ, ಐತಿಹಾಸಿಕ ಸ್ಥಳಗಳ ಪರಿಚಯ ವಿದ್ಯಾರ್ಥಿಗಳಿಗೆ ತಿಳಿದಿರುವುದು ಅತ್ಯಗತ್ಯ ಎಂದು ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕರಾದ ಡಾ. ತುಕಾರಾಮ ಪೂಜಾರಿ ಹೇಳಿದರು.

ಅವರು ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಎಕ್ಸೆಲ್ ಪರ್ಬದ ಅಂಗವಾಗಿ ನಡೆದ ಹಿರಿಯ ವಿದ್ಯಾರ್ಥಿಗಳ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು,ಯಾವುದೇ ಸಂಸ್ಥೆಗೂ ಹಿರಿಯ ವಿದ್ಯಾರ್ಥಿಗಳು ನಿಜವಾದ ರಾಯಭಾರಿಗಳು, ಸಂಸ್ಥೆಯ ಬಗ್ಗೆ ಅವರಾಡುವ ಮಾತುಗಳನ್ನು ಸಮಾಜ ಬಹಳ ಬೇಗ ಸ್ವೀಕರಿಸುತ್ತದೆ ಎಂದರು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯದರ್ಶಿ ಅಭಿರಾಮ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ ಪ್ರಸ್ತಾಪಿಸಿ, ಉಪನ್ಯಾಸಕಿ ಶಾಂತಿಪ್ರಿಯ ಸ್ವಾಗತಿಸಿದರು. ಪುರುಷೋತ್ತಮ್ ನಿರೂಪಿಸಿದರು. ವಿಕಾಸ್ ಹೆಬ್ಬಾರ್ ವಂದಿಸಿದರು.

Exit mobile version