Site icon Suddi Belthangady

ದಲಿತ ನಾಯಕ ಡೀಕಯ್ಯ ಸಾವು ಪ್ರಕರಣ- ಸಿಐಡಿ ತಂಡ ಬೆಳ್ತಂಗಡಿಗೆ: ತನಿಖೆ ಆರಂಭಿಸಿದ ಪೊಲೀಸ್ ತಂಡ


ಬೆಳ್ತಂಗಡಿ: ಈ ವರ್ಷದ ಜುಲೈನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಹಿರಿಯ ದಲಿತ ನಾಯಕ ಬಹುಜನ ಚಳುವಳಿಯ ನೇತಾರ ಪಿ.ಡೀಕಯ್ಯ ಅವರ ಸಾವಿನ ಕುರಿತು ಸಿಐಡಿ ತನಿಖೆ ಆರಂಭಿಸಿದೆ. ಬಿಎಸ್ ಎನ್ ಎಲ್ ನಿವೃತ್ತ ಉದ್ಯೋಗಿಯಾಗಿದ್ದ ಪಿ. ಡೀಕಯ್ಯ ಜುಲೈ 6 ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆ ಕುಸಿದು ಬಿದ್ದು ತಲೆಗೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಹಿದ್ದರು. ನಂತರ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಜುಲೈ 8 ರಂದು ಅವರು ನಿಧನರಾದ್ರು.

ಡೀಕಯ್ಯ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ದೂರು:

ಡೀಕಯ್ಯರವರ ಸಾವಿನ ಬಗ್ಗೆ ಹಲವಾರು ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಡೀಕಯ್ಯರ ಕುಟುಂಬಸ್ಥರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ರು.ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರು ಅಧಿಕಾರಿಗಳ ನೇತೃತ್ವದಲ್ಲಿ ಜುಲೈ ಮೃತದೇಹವನ್ನು ಹೊರತೆಗೆದು ವೈದ್ಯಾಧಿಕಾರಿಗಳ ತಂಡದ ಸಮ್ಮುಖದಲ್ಲಿ ಶವ ಪರೀಕ್ಷೆ ನಡೆಸಿದ್ದರು.

ತನಿಖೆಯನ್ನು ಸಿಐಡಿಗೆ ಒಪ್ಪಿಸಿದ್ದ ರಾಜ್ಯ ಸರ್ಕಾರ
ಈಗ ಸಿಐಡಿ ಅಧಿಕಾರಿಗಳಿಂದ ತನಿಖೆ ಆರಂಭ:

ಡೀಕಯ್ಯ ಸಾವಿನ ಕುರಿತು ಹೆಚ್ಚಿನ ತನಿಖೆಗೆ ಆಗ್ರಹಿಸಿ ಡೀಕಯ್ಯರ ಕುಟುಂಬ ಕೇಸನ್ನು ಸಿಐಡಿಗೆ ಒಪ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ರು,ಈ ಹಿನ್ನಲೆಯಲ್ಲಿ ಸರ್ಕಾರ ಸಿಐಡಿ ತನಿಖೆಗೆ ಸೂಚನೆ ನೀಡಿತ್ತು. ಇದೀಗ ಸಿಐಡಿ ತನಿಖೆ ಆರಂಭಗೊಂಡಿದ್ದು, ಮೂವರು ಅಧಿಕಾರಿಗಳ ತಂಡ ಬೆಳ್ತಂಗಡಿಯಲ್ಲಿ ಬೀಡು ಬಿಟ್ಟಿದ್ದಾರೆ. ಪೊಲೀಸ್ ಮಾಹಿತಿಯನ್ನು ಪಡೆದು, ಅಂದಿನ ಘಟನೆಯ ಪಿನ್ ಟು ಪಿನ್ ಮಾಹಿತಿ ಕಲೆ ಹಾಕಿದ ನಂತರ ಡೀಕಯ್ಯರವರ ಗರ್ಡಾಡಿ ಮನೆಗೂ ಭೇಟಿ ನೀಡುವ ಸಾಧ್ಯತೆಯಿದ್ದು, ಒಟ್ಟಿನಲ್ಲಿ ಡೀಕಯ್ಯ ಸಾವಿನ ಪ್ರಕರಣದ ತನಿಖೆ ಚುರುಕುಗೊಂಡಂತಾಗಿದೆ.

Exit mobile version