ಕೊಯ್ಯೂರು : ಸರಕಾರಿ ಪದವಿ ಪೂರ್ವ ಕಾಲೇಜು ಕೊಯ್ಯೂರು ಇದರ ಸಾಹಿತ್ಯ ಸಂಘದ ಆಶಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರಗಿತು. ‘ಸಾಹಿತ್ಯ ಪರಿಚಯ, ಉಪಯೋಗ ಮತ್ತು ವೃತ್ತಿ ಅವಕಾಶಗಳು’ ಎಂಬ ವಿಷಯದ ಬಗ್ಗೆ ಉಜಿರೆ ಎಸ್. ಡಿ. ಎಮ್.ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ದಿವ ಕೊಕ್ಕಡ ಅವರು ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಬಾಲಕೃಷ್ಣ ಬೇರಿಕೆ ಸಭಾಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘದ ನಿರ್ದೇಶಕಿ ಕನ್ನಡ ಉಪನ್ಯಾಸಕಿ ಶ್ರೀಮತಿ ರಶ್ಮಿದೇವಿ ಕೆ.ಆರ್. ಪ್ರಾಸ್ತಾವಿಕವಾಗಿ ಮಾತಾಡಿದರು. ವಿದ್ಯಾರ್ಥಿಗಳಾದ ಉದಯಕುಮಾರ್ ಸ್ವಾಗತಿಸಿದರು. ಪವಿತ್ ಅತಿಥಿ ಪರಿಚಯ ನಡೆಸಿಕೊಟ್ಟರು. ಸಿಯಾನ ವಂದಿಸಿದರು. ಅಕ್ಷಯ್ ಕುಮಾರ್, ಅಶ್ವಿನ್, ರಾಬಿಹ, ಸಿಂಚನಾ ಕಾರ್ಯಕ್ರಮ ನಿರ್ವಹಿಸಿದರು. ಸಾಹಿತ್ಯ ಸಂಘದ ಸಹ ನಿರ್ದೇಶಕಿ ಉಪನ್ಯಾಸಕಿ ತೃಪ್ತಿ ಪಿ ಜಿ ಹಾಗೂ ಸಾಹಿತ್ಯ ಸಂಘದ ವಿದ್ಯಾರ್ಥಿ ಪ್ರತಿನಿಧಿ ಮನ್ವಿತ್ ಉಪಸ್ಥಿತರಿದ್ದರು.
ಬಳಿಕ ನಡೆದ ‘ಸಾಹಿತ್ಯ ಸೌರಭ ಸಾಹಿತ್ಯಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ತುಳಸಿ, ಝಮೀರ, ವೈಶಿತಾ, ಅಕ್ಷಯ್, ಭರತೇಶ್, ಪವಿತ್, ರಹಿಮಾನ್, ಮುಫೈಲಾ, ಶಂಶಾದ್, ವೀಣಾ, ರಾಬಿಹ, ಅಖಿಲಾ, ಸುಮನಾ, ಸಿಯಾನ, ಹಾಯ ಫಾತಿಮಾ, ಆಶೀಕ್, ಮೇಘಶ್ರೀ, ಉದಯ್ ಮತ್ತು ಸಂರೀನಾ ಸ್ವರಚಿತ ಕವಿತೆ, ಕಥೆಗಳನ್ನು ಪ್ರಸ್ತುತಪಡಿಸಿದರು.