Site icon Suddi Belthangady

ಪಡಂಗಡಿ ಗ್ರಾಮ ಪಂಚಾಯತ್ ನಲ್ಲಿ ದೂರ ದೃಷ್ಟಿ ಯೋಜನೆ ಗ್ರಾಮ ಸಭೆ


ಪಡಂಗಡಿ: ಪಡಂಗಡಿ ಗ್ರಾಮ ಪಂಚಾಯತಿಯ ಅಂಬೇಡ್ಕರ್ ಭವನದಲ್ಲಿ ದೂರದೃಷ್ಟಿ ಯೋಜನೆಯ ಬಗ್ಗೆ ಗ್ರಾಮಸಭೆಯನ್ನು ಗ್ರಾಮ‌ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ ಯವರ ಡಿ.21 ರಂದು ಅಧ್ಯಕ್ಷ ತೆಯಲ್ಲಿ‌‌‌ ನಡೆಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಫನಾ‌ ದೂರದೃಷ್ಟಿ ಯೋಜನೆ‌ಯ ಬಗ್ಗೆ ಮಾಹಿತಿ‌ ನೀಡಿದರು. ಗ್ರಾಮಪಂಚಾಯತ್ ಸದಸ್ಯ ಸಂತೋಷ್ ಜೈನ್ ಪ್ರಾಸ್ತಾವಿಕ‌ ಮಾತನಾಡಿದರು.ಮಾರ್ಗದರ್ಶಿ ಅಧಿಕಾರಿಯಾಗಿ ಮಹಿಳಾ‌ ಮತ್ತು ಮಕ್ಕಳ‌‌ ಅಭಿವೃದ್ದಿ‌‌ ಯೋಜನೆಯ‌ ಹಿರಿಯ‌ಮೇಲ್ವಿಚಾರಕಿ ರತ್ನಾವತಿ‌ ಉಪಸ್ಥಿತರಿದ್ದರು.

ಪಂಚಾಯತ್ ಉಪಾಧ್ಯಕ್ಷೆ ಕವಿತಾ, ಸದಸ್ಯರು, ಗ್ರಾಮಸ್ಥರು ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ತಾರನಾಥ ನಾಯ್ಕ‌ ಸ್ವಾಗತಿಸಿ‌‌, ಪಂಚಾಯತ್ ಸದಸ್ಯ ಹಾಮದ್ ಬಾವ ವಂದಿಸಿದರು.

Exit mobile version