ಬೆಳ್ತಂಗಡಿ: ಜಾರ್ಖಂಡ್ ರಾಜ್ಯದಲ್ಲಿರುವ ಜೈನರ ಪವಿತ್ರ ಕ್ಷೇತ್ರ ಸಮ್ಮೇದಗಿರಿ ಕ್ಷೇತ್ರವನ್ನು ಸರ್ಕಾರವು ಪ್ರವಾಸಿತಾಣವಾಗಿ ರೂಪಿಸಲು ಯೋಜಿಸಿದ್ದು ಇದನ್ನು ಖಂಡಿಸಿ ಡಿ.20 ರಂದು ಬೆಳ್ತಂಗಡಿಯಲ್ಲಿ ಜೈನ ಸಮಾಜದವರು ತಹಶೀಲ್ದಾರ್ ಪೃಥ್ವಿ ಸಾನಿಕಂ ಮೂಲಕ ಪ್ರಧಾನಿ ಮತ್ತು ರಾಷ್ಟ್ರಪತಿಗೆ ಅವರಿಗೆ ಮನವಿ ಸಲ್ಲಿಸಿದರು.
ಡಾ. ಜಯಕೀರ್ತಿ ಜೈನ್, ಡಾ. ಹಾ.ಮಾ.ನಾ. ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಎಸ್.ಡಿ. ಶೆಟ್ಟಿ, ಸುಗುಣಾ ಎಸ್. ಡಿ. ಶೆಟ್ಟಿ, ವಿಜಯಕುಮಾರ್ ಜೈನ್, ನಿರಂಜನ್ ಜೈನ್ ಕುದ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.