Site icon Suddi Belthangady

ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೀರು ಸಂರಕ್ಷಣ ಅಭಿಯಾನ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಇಂಟರಾಕ್ಟ್ ಕ್ಲಬ್‌ ವತಿಯಿಂದ ನೀರು ಸಂರಕ್ಷಣಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳಿಗೆ ನೀರು ಸಂರಕ್ಷಣೆಯ ಕುರಿತು ಹಾಗೂ ನೀರಿನ ಅಗತ್ಯತೆಯ ಕುರಿತು ವಿಡಿಯೋವನ್ನು ತೋರಿಸಲಾಯಿತು.

ವಿದ್ಯಾರ್ಥಿಗಳು ನೀರಿನ ಮಹತ್ವವನ್ನು ಕುರಿತು ಹಾಗೂ ಅದನ್ನು ಸಂರಕ್ಷಿಸುವ ಕುರಿತು ಪೋಸ್ಟ್ ಕಾರ್ಡ್ ನಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ಪತ್ರ ಬರೆಯುವ ಮುಖಾಂತರ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡಲಾಯಿತು ವಿದ್ಯಾರ್ಥಿಗಳು ಅತ್ಯಂತ ಉತ್ಸುಕತೆಯಿಂದ ಈ ಅಭಿಯಾನದಲ್ಲಿ ಪಾಲ್ಗೊಂಡರು.

Exit mobile version