ಉಜಿರೆ: ದೂರಗಾಮಿ ಚಿಂತನೆಗಳು, ಸ್ವ ಇಚ್ಛಾಶಕ್ತಿ, ಗುರಿ, ಮಾನವೀಯತೆ, ಸರಳತೆ , ನಾಯಕತ್ವ ಮುಂತಾದ ಗುಣಗಳಿಂದಾಗಿ ಅನೇಕರು ಮಾದರಿ ವ್ಯಕ್ತಿಗಳಾಗಿ ಇರುವ ಅನೇಕ ನಿದರ್ಶನ ನೋಡುತ್ತೇವೆ. ಯಾವುದೇ ಕಾರ್ಯಕ್ಕೆ ಪೂರ್ಣ ಸಾಮರ್ಥ್ಯ ಹಾಕಿದರೆ ಆತ ನಾಯಕನಾಗುತ್ತಾನೆ. ನಾಯಕತ್ವವು ಯಾವಾಗಲೂ ಸಾಧ್ಯತೆಗಳನ್ನು ನೋಡುತ್ತದೆ. ನಾಯಕತ್ವ ಎನ್ನುವುದು ನಮ್ಮ ಮನಸ್ಥಿತಿ ಮೇಲಿರುತ್ತದೆ. ಸಮಾಜಕ್ಕೆ ಕೊಡುವ ಕೊಡುಗೆಯಿಂದಾಗಿಯೂ ಸಹ ನಾಯಕರಾಗಬಹುದು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತ್ತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಡಾ. ಧನೇಶ್ವರಿ ಹೇಳಿದರು.
ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ನಾಯಕತ್ವ ಶಿಬಿರದಲ್ಲಿ ಅಭ್ಯಾಗತರಾಗಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ಸಹ ಯೋಜನಾಧಿಕಾರಿ ಚೇತನಾ ಕುಮಾರಿ, ನಾಯಕ ವಂಶಿ ಭಟ್ ಉಪಸ್ಥಿತರಿದ್ದರು.
ಚಂದನಾ ಸ್ವಾಗತಿಸಿ, ನಾಯಕಿ ವರ್ಧಿನಿ ವಂದಿಸಿದರು. ಉಪ ನಾಯಕಿ ಪ್ರಣಮ್ಯಾ ಜೈನ್ ನಿರೂಪಿಸಿದರು.