ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಕ್ರೀಡಾಕೂಟ ಜರುಗಿತು. ರಾಷ್ಟ್ರೀಯ ಕ್ರೀಡಾಪಟು, ರಾಜ್ಯ ಕಬಡ್ಡಿ ಪಟು ಹಕೀಂ ಬೆಳ್ತಂಗಡಿಯವರು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ, ಪ್ರಸ್ತುತ ಕ್ರೀಡಾ ವಿಭಾಗವು ಯುವಕರಿಗೆ ಬಹಳಷ್ಟು ಅವಕಾಶವನ್ನು ಒದಗಿಸಿಕೊಡುತ್ತಿದೆ. ನಿರಂತರ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸಬಹುದು. ಎಲ್ಲೇ ಹೋದರೂ ಕ್ರೀಡಾಪಟುವನ್ನು ಜನ ಗುರುತಿಸುತ್ತಾರೆ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕ್ರೀಡಾಪಟಗಳ ಕೊಡುಗೆ ಬಹಳ ದೊಡ್ಡದು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುಲೈಮಾನ್ ಭೀಮಂಡೆ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಕನಿಕ್ಕಿಲರವರು ಆಗಮಿಸಿದ್ದರು. ಶಾಲಾ ಮಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಕಾರದ ರಾಜಶ್ರೀ ಕುಮಾರಿ, ಜಗದೀಶ್ , ಗಣೇಶ್ವರ್, ಸುಮನ್ ಯು ಎಸ್, ಚಿತ್ರಾ ಪಿ. ಎಚ್ , ಸುಂದರ್ ಡಿ ಹಾಗೂ ಬಿ ಎಡ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭೆಯ ಮೊದಲು ಶಾಲಾ ವಿದ್ಯಾರ್ಥಿ ನಾಯಕ ಮಹಮ್ಮದ್ ತಾಹಿರ್ ರವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಮಾರ್ಚ್ ಫಾಸ್ಟ್ ನಡೆಯಿತು.
ಕ್ರೀಡಾ ಶಿಕ್ಷಕ ಕೃಷ್ಣಾನಂದ ಸ್ವಾಗತಿಸಿ, ರವಿಚಂದ್ರ ಧನ್ಯವಾದ ಸಲ್ಲಿಸಿದರು, ವಾರಿಜ ಎಸ್. ಗೌಡ ಸಭೆಯನ್ನು ನಿರೂಪಿಸಿದರು.