Site icon Suddi Belthangady

ಚಿಬಿದ್ರಿ: ಸುದ್ದಿ ಬಿಡುಗಡೆ ಪತ್ರಿಕೆ ವಿತರಕ ಸೇಸಪ್ಪ ಗೌಡ ಅಸೌಖ್ಯದಿಂದ ನಿಧನ

ಚಿಬಿದ್ರಿ: ಚಿಬಿದ್ರಿ ಗ್ರಾಮದ ಪೆರಿಯಡ್ಕ ದಿ|ವೀರಪ್ಪ ಗೌಡ ಎಂಬವರ ಪುತ್ರ ಸೇಸಪ್ಪ ಗೌಡ (48) ಕೆಲಕಾಲದ ಅಸೌಖ್ಯದಿಂದ ಡಿ.18ರಂದು ಸ್ವಗೃಹದಲ್ಲಿ ನಿಧನರಾದರು.

ಇವರು ವೃತ್ತಿಯಲ್ಲಿ ಟೈಲರಾಗಿ ಬೆಂಗಳೂರಿನಲ್ಲಿದ್ದರು. ನಂತರದ ದಿನಗಳಲ್ಲಿ ಕ್ರಮೇಣ ತನ್ನ ಸೊಂಟದ ಸ್ವಾಧೀನ ಕಳೆದುಕೊಂಡು ಊರಿಗೆ ಮರಳಿದ್ದರು. ಹಲವಾರು ಚಿಕಿತ್ಸೆಗಳನ್ನು ನೀಡಿದರೂ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ಮನೆಯವರು ಸಣ್ಣ ಗೂಡಂಗಡಿ ನಿರ್ವಹಿಸುತ್ತಿದ್ದು ಗಾಲಿ ಕುರ್ಚಿಯ ಸಹಾಯದಿಂದ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಇವರು ಸುದ್ದಿ ಬಿಡುಗಡೆ ಪತ್ರಿಕಾ ವಿತರಕರಾಗಿ 18 ವರ್ಷಗಳಿಂದ ಪೆರಿಯಡ್ಕ ಭಾಗದಲ್ಲಿ ಮನೆಮನೆಗೆ ಪತ್ರಿಕೆ ವಿತರಣೆ ಮಾಡುತ್ತಿದ್ದರು. ಮೃತರು ತಾಯಿ ಪೂವಕ್ಕ, ಪತ್ನಿ ಹೇಮಾವತಿ, ಸಹೋದರರಾದ ುಮೇಶ, ಸುರೇಶ್, ತುಂಗಪ್ಪ ಮೂರು ಸಹೋದರರನ್ನು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version