ಮಚ್ಚಿನ : ತುಳು ನಾಡಿನ ಇತಿಹಾಸ ಪ್ರಸಿದ್ಧ ನಾಗ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರಾ ಬಾಕಿಮಾರ ಗದ್ದೆಯಲ್ಲಿ ಶ್ರೀ ಅನಂತೇಶ್ವರ ಸ್ವಾಮಿ ಕಂಬಳ ಸಮಿತಿ ನಡೆಸುವ 25ನೇ ವರ್ಷದ ಶೇಷ ನಾಗ ಜೋಡುಕರೆ ಕಂಬಳವು ಡಿ.18ರಂದು ಮಚ್ಚಿನ ಕುಟ್ಟಲಿಕೆ ಗೋಪಾಲ ಮೂಲ್ಯ ರವರು ಚಾಲನೆ ನೀಡಿದರು.
ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಜೀವ ಶೆಟ್ಟಿ ಮುಗೆರೋಡಿ, ಶ್ರೀನಿವಾಸ ಗೌಡ ಪಳ್ಳತ್ತಲ, ವಿಶ್ವನಾಥ ಕಾರಂದೂರು, ರಾಧಾಕೃಷ್ಣ ಶೆಟ್ಟಿ ನೆತ್ತರ, ಸದಾನಂದ ಪೂಜಾರಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕಂಬಳ ಸಮಿತಿ ಅಧ್ಯಕ್ಷ ಪದ್ಮನಾಭ ಸುವರ್ಣ, ಶ್ರೀ ಕ್ಷೇತ್ರದ ಆನುವಂಶೀಯ ಆಡಳಿತ ಮೊಕ್ತೇಸರರಾದ ಡಾ. ಎಂ. ಹರ್ಷ ಸಂಪಿಗೆತ್ತಾಯ, ಗೌರವಾಧ್ಯಕ್ಷ ಸುಧೀರ್ ಶೆಟ್ಟಿ ಕೊರಬೆಟ್ಟು, ಉಪದ್ಯಕ್ಷ ಪ್ರಮೋದ್ ಕುಮಾರ್, ಕಾರ್ಯದರ್ಶಿ ವಸಂತ ಮಾರಕಡ, ಗೌರವ ಸಲಹೆಗಾರ ಪ್ರಕಾಶ್ ಸಂಪಿಗೇತ್ತಾಯ, ಜೊತೆ ಕಾರ್ಯದರ್ಶಿ ಅವಿನಾಶ್, ಕಂಬಳ ಸಮಿತಿ ಸದಸ್ಯರು, ಕಂಬಳ ಅಭಿಮಾನಿಗಳು ಉಪಸ್ಥಿತರಿದರು.