ಬೆಳ್ತಂಗಡಿ: ಕೆ.ಎಸ್.ಎಂ.ಸಿ.ಎ ಬೆಳ್ತಂಗಡಿ ಧರ್ಮಪ್ರಾಂತ್ಯ ಹಾಗೂ ವಿವಿಧ ಭಕ್ತ ಸಂಘಟನೆಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಕ್ರಿಸ್ ಆಚರಣೆ ಕ್ರಿಸ್‌ಮಸ್ ಬೆಲ್ಸ್-2022 ಕಾರ್ಯಕ್ರಮವು ಡಿ.21ರಂದು ಬೆಳ್ತಂಗಡಿ ಎಸ್.ಡಿ.ಎಂ ಸಭಾ ಭವನದಲ್ಲಿ ನಡೆಯಲಿದೆ ಎಂದು ಕೆಎಸ್‌ಎಂಸಿಎ ಅಧ್ಯಕ್ಷ ಬಿಟ್ಟಿ ನೆಡುನಿಲಂ ಅವರು ಹೇಳಿದರು.
ಅವರು ಡಿ.16ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಂಜೆ 5 ಗಂಟೆ ಬೆಳ್ತಂಗಡಿ ಸಾಂತೋಮ್ ಟವರ್ ಬಳಿಯಿಂದ ಎಸ್.ಡಿ.ಎಂ ಸಭಾ ಭವನದ ತನಕ ರ್‍ಯಾಲಿ ನಡೆಯಲಿದೆ. ರ್‍ಯಾಲಿಯನ್ನು ವಿಧಾನ ಪರಿಷತ್ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಧರ್ಮಾಧ್ಯಕ್ಷ ಅತೀ ವಂದನೀಯ ಬಿಷಪ್ ಲಾರೆನ್ಸ್ ಮುಕ್ಕುಯಿ, ಶಾಸಕ ಹರೀಶ್ ಪೂಂಜ, ಧರ್ಮೋಪದೇಶ ಕೇಂದ್ರದ ನಿರ್ದೇಶಕ ಫಾ. ಜೋಸೆಫ್ ಮಟ್ಟಂ, ಕೆಎಸ್‌ಎಂಸಿಎ ನಿರ್ದೇಶಕ ಫಾ. ಶಾಜಿ ಮ್ಯಾಥ್ಯು ವೆಟ್ಟಂತಡತ್ತಿಲ್, ಫ್ಯಾಮಿಲಿ ಅಪ್ಪಸ್ಟೋಲೆಟ್ ನಿರ್ದೇಶಕ ಫಾ. ಜೋಸೆಫ್ ಚೀರನ್, ಡಿಕೆಆರ್‌ಡಿಎಸ್ ನಿರ್ದೇಶಕ ಫಾ. ಬಿನೋಯಿ ಎ.ಜೆ ಕರ್ನಾಟಕ ರಾಜ್ಯಧ್ಯಕ್ಷ ಸೇವಿಯರ್ ಪಾಲೇಲಿ, ಪ್ರಧಾನಕಾರ್ಯದರ್ಶಿ ಸೆಬಾಸ್ಟ್ಯನ್ ಎಂ.ಜೆ, ಪಿಆರ್‌ಒ ಸೆಬಾಸ್ಟ್ಯನ್ ಪಿ.ಸಿ, ಕೋಶಾಧಿಕಾರಿ ಜಿಮ್ಸನ್ ಕೆ.ಜೆ, ಸದಸ್ಯರಾದ ಜೋರ್ಜ್ ಟಿ.ವಿ, ಬೆನ್ನಿ ಮುದೂರ್, ಮ್ಯಾಥ್ಯು ಮೂರ್ನಾಡ್, ರೀನಾ ಶಿಬಿ, ಅಲ್ಪೋನ್ಸಾ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕರೋಲ್, ಸಂತಾ ಕ್ಲೋಸ್, ಕೇಕ್,ಕರೋಲ್ ಸಿಂಗಿಂಗ್ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಣೆ ಬಳಿಕ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಎಂಸಿಎ ನಿರ್ದೇಶಕ ಫಾ. ಶಾಜಿ ಮ್ಯಾಥ್ಯು ವೆಟ್ಟಂತಡತ್ತಿಲ್, ಪ್ರಧಾನ ಕಾರ್ಯದರ್ಶಿ ಸೆಬಾಸ್ಟ್ಯನ್ ಎಂ.ಜೆ, ಕೋಶಾಧಿಕಾರಿ ಜಿಮ್ಸನ್ ಕೆ.ಜೆ, ಪಿಆರ್‌ಒ ಸಿಭಾಸ್ಟ್ಯನ್ ಪಿ.ಸಿ ಉಪಸ್ಥಿತರಿದ್ದರು.