Site icon Suddi Belthangady

ಉಜಿರೆ ಪೆರ್ಲದಲ್ಲಿ ಮಣ್ಣಿನಡಿಯಲ್ಲಿ ಶಿವಲಿಂಗ ಪತ್ತೆ: ದೇವಸ್ಥಾನದ ಅಷ್ಟಮಂಗಲ ಪ್ರಶ್ನೆಯ ಸಂದರ್ಭದಲ್ಲಿ ಕಂಡುಬಂದ ಶಿವಲಿಂಗ

ಉಜಿರೆ: ಇಲ್ಲಿಯ ಪೆರ್ಲದಲ್ಲಿ ಗ್ರಾಮಸ್ಥರಿಂದ ಪುರಾತನ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ನವೀಕರಣಕ್ಕಾಗಿ ದೈವಜ್ಞರಿಂದ ಅಷ್ಟಮಂಗಲ ಪ್ರಶ್ನೆ ಇಟ್ಟ ಸಂದರ್ಭದಲ್ಲಿಯೇ ದೇವಸ್ಥಾನದ ಕುರುಹು ಇದ್ದ ಪಕ್ಕದ ಮಣ್ಣಿನಡಿಯಲ್ಲಿ ಪುರಾತನ ಶಿವಲಿಂಗವೊಂದು ಡಿ.16 ರಂದು ಪತ್ತೆಯಾಗಿದೆ.

ಸದ್ರಿ ಪೆರ್ಲದಲ್ಲಿ ಕಳೆದ ಡಿ.8 ಮತ್ತು 9 ಹಾಗೂ 15 ಮತ್ತು 16ರಂದು ದೈವಜ್ಞರಾದ ನೆಲ್ಯಾಡಿ ಶ್ರೀಧರ ಗೋರೆಯವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಯುತ್ತಿತ್ತು. ಈ ವೇಳೆ ಅವರು ತಿಳಿಸಿದಂತೆ ಈ ಪರಿಸರದಲ್ಲಿ ಶಿವನ ಸಾನಿಧ್ಯವಿದೆಯೆಂದು ಗೋಚರಿಸುತ್ತದೆ ಎಂದು ತಿಳಿಸಿದ್ದರು ಅಂತೆಯೇ ಅವರು ತಿಳಿಸಿದ ಜಾಗದಲ್ಲಿ ಅಗೆದಾಗ ಮಣ್ಣಿನಡಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ.

ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಕೆಲಸ ಕಾರ್ಯಗಳು ನಡೆಯುತ್ತಿದ್ದು ಉಜಿರೆ ಗ್ರಾ.ಪಂ ಉಪಾಧ್ಯಕ್ಷ ರವಿಕುಮಾರ್ ಇವರ ಅಧ್ಯಕ್ಷತೆಯಲ್ಲಿ ಮುಕ್ತೇಸರ ಹಾಗೂ ಕಾರ್ಯದರ್ಶಿ ಕೃಷ್ಣ ಒಪ್ಪಂತಾಯ ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಅಷ್ಟಮಂಗಲ ಪ್ರಶ್ನೆ ಸಂದರ್ಭದಲ್ಲಿ ಶ್ರೀಧರ ಗೋರೆ ಅವರ ಜೊತೆಗೆ ಮಂಗಳೂರು ಮಂಗಳಾದೇವಿ ದೇವಸ್ಥಾನದ ಅರ್ಚಕ ಗಣೇಶ್ ಐತಾಳ, ಶ್ರೀನಿಧಿ ಮುಚ್ಚಿನ್ನಾಯ ಕಾರಿಂಜ, ಅರ್ಚಕ ಅನಂತ ಇರ್ವರ್ತಾಯ ಸಹಕರಿಸಿದರು.

ಸ್ಥಳೀಯರಾದ ರಾಮಣ್ಣ ನಾಯ್ಕ, ಉಜಿರೆ ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀಧರ ಪೂಜಾರಿ, ಪಿ.ಬಿ ಬೂಚನಾಯ್ಕ, ಧಾಮೋದರ, ಪ್ರವೀಣ್ ಕುಮಾರ್ ಅಲ್ಲದೆ ಊರಿನ ಗಣ್ಯರು, ಹಿರಿಯರು, ನಾಗರಿಕರು ಈ ವೇಳೆ ಉಪಸ್ಥಿತರಿದ್ದರು.

ಅಷ್ಟಮಂಗಲದ ಬಳಿಕ ಪ್ರಶ್ನಾಚಿಂತನೆಯಲ್ಲಿ ಬಂದಂತೆಯೇ ಮುಂದಿನ ದೇವಸ್ಥಾನದ ಅಭಿವರದ್ಧಿ ಕಾರ್ಯಗಳು ನಡೆಯಲಿದೆ. ಈ ಸಂದರ್ಭದಲ್ಲಿಯೇ ಶಿವಲಿಂಗ ಪತ್ತೆಯಾಗಿರುವುದು ಕ್ಷೇತ್ರದ ಸಾನಿಧ್ಯಕ್ಕೆ ಶಕ್ತಿ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Exit mobile version