Site icon Suddi Belthangady

ಉಜಿರೆಯಲ್ಲಿ ಎರಡನೇ ವರ್ಷದ ಅರೆ ಭಾಷೆ ದಿನಾಚರಣೆ

ಉಜಿರೆ :ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಅರೆ ಭಾಷೆ ಅಭಿಮಾನಿ ಬಳಗ ಉಜಿರೆ ಇವರು ಡಿ.15 ರಂದು ಎರಡನೇ ವರ್ಷದ ಅರೆ ಭಾಷೆ ದಿನಾಚರಣೆ ಉಜಿರೆ ಶಾರದಾ ಮಂಟಪದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಕುಸುಮಾಧರ್ .ಡಿ. ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ಲಕ್ಷ್ಮಿನಾರಾಯಣ ಕಜ್ಜಿಗದ್ದೆ ಮಾತಾಡಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಬೆಳ್ತಂಗಡಿ ತಾಲೂಕು ಅರೆ ಭಾಷೆ ಅಭಿಮಾನಿ ಬಳಗ ಉಜಿರೆ ಇದರ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ ವಹಿಸಿದ್ದರು.

ಅತಿಥಿಗಳಾಗಿ ನಿವೃತ್ತ ಡಿಡಿಎಲ್ಆರ್ ಡಿ. ಕೆ. ಕುಸುಮಾಧರ ಗೌಡ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡ ಸಂಘ (ರಿ) ಮಂಗಳೂರಿನ ಅಧ್ಯಕ್ಷ ಕೆ. ಲೋಕಯ್ಯ ಗೌಡ ಮಾತನಾಡಿದರು. ಗೌರವ ಉಪಸ್ಥಿತಿಯಾಗಿ ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕಿನ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಾಜಿ ಅಧ್ಯಕ್ಷ ಜಿ.ಸೋಮೇ ಗೌಡ, ನಿವೃತ್ತ ಅಧ್ಯಾಪ ಕೆ. ದೇವಪ್ಪ ಗೌಡ, ಬೆಳ್ತಂಗಡಿ ತಾಲೂಕು ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಚಂದ್ರಕಾಂತ್, ಕೆಎಲ್ ಹಾಗೂ ಸಂಘದ ಕಾರ್ಯದರ್ಶಿ ಉಷಾ ಲಕ್ಷ್ಮಣ ಗೌಡ, ಕೋಶಾಧಿಕಾರಿ ಆನಂದ ಗೌಡ, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತೆಂಕಿಲ ಗೋಪಾಲಗೌಡ, ಶ್ರೀಮತಿ ವಸುಮತಿ ಶೇಸಪ್ಪಗೌಡ ಬಾಜಿಮಾರು, ಕೊಳ್ತಿಗೆ ನಾರಾಯಣಗೌಡ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಬಾಲಭಾಸ್ಕರ ಗೌಡ ಇವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮಕ್ಕೆ ಕೆ. ಲೋಕೇಶ್ ಗೌಡ 10,000 ಧನಸಹಾಯ ನೀಡಿ ಸಹಕರಿಸಿದರು. ಈ ಸಂದರ್ಭದಲ್ಲಿ ವಿವಿಧ ಒಳಾಂಗಣ ಆಟದ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.ವಿಜೇತರ ಪಟ್ಟಿಯನ್ನು ಶ್ರೀಮತಿ ಬಿಂದು ವಾಚಿಸಿದರು, ಉಷಾ ಲಕ್ಷ್ಮಣ ಗೌಡ ಸ್ವಾಗತಿಸಿ ಧರ್ಮೇಂದ್ರ ಗೌಡ ಬೆಳಾಲು ಧನ್ಯವಾದ ನೀಡಿ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ
ಬೆಳಾಲು ನಿರೂಪಿಸಿದರು .

Exit mobile version